ಈ Phone ಗಳಿಗೆ ಡಿಸೆಂಬರ್‌ 31ರ ನಂತರ ವಾಟ್ಸಾಪ್‌ Support ಮಾಡಲ್ವಂತೆ….!!

ಲಂಡನ್ : ವಿಶ್ವದಲ್ಲೇ ಅತೀ ಹೆಚ್ಚು ಮಂದಿ ಚಾಟ್ ಮಾಡಲು ಬಳಸುವ ವಾಟ್ಸಾಪ್‌, ಡಿಸೆಂಬರ್‌ 31ರ ಬಳಿಕ ಕೆಲ ಮೊಬೈಲ್‌ಗಳಿಗೆ ಸಪೋರ್ಟ್‌ ಮಾಡದಿರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ಬ್ಲಾಕ್‌ ಬೆರ್ರಿ ಒಎಸ್‌, ಬ್ಲಾಕ್‌ ಬೆರಿ 10 ಒಎಸ್‌, ವಿಂಡೋಸ್‌ ಫೋನ್‌ 8.0 ಮತ್ತು ಅದಕ್ಕೂ ಹಳೆಯ ಒಎಸ್‌ಗಳಿಗೆ ಸಪೋರ್ಟ್‌ ಮಾಡದಿರಲು ನಿರ್ಧರಿಸಿದೆ. ಕೇವಲ ಇಷ್ಟೇ ಅಲ್ಲದೆ, ಡಿಸೆಂಬರ್‌ 2018ರ ನಂತರ ನೋಕಿಯಾ ಎಸ್‌ 40ಫೋನ್‌ಗಳಲ್ಲೂ ವಾಟ್ಸಾಪ್‌ ಕೆಲಸ ಮಾಡುವುದಿಲ್ಲ ಎಂದು ತಿಳಿದುಬಂದಿದ್ದು, ಆ್ಯಂಡ್ರಾಯ್ಡ್‌ 2.3.7 ಆವೃತ್ತಿಯ ಫೋನ್‌ಗಳ್ಲೂ 2020ರ ಬಳಿಕ ಸಪೋರ್ಟ್ ಮಾಡುವುದಿಲ್ಲ ಎಂದು ವಾಟ್ಸಾಪ್‌ ಕಂಪನಿ ಹೇಳಿದೆ.

ಈ ಕುರಿತು ವಾಟ್ಸಾಪ್‌ ಸಂಸ್ಥೆ ತನ್ನ ಬ್ಲಾಗ್‌ನಲ್ಲಿ ಹೇಳಿಕೊಂಡಿದ್ದು, ಕೆಲ ಒಎಸ್‌ಗಳಲ್ಲಿ ರನ್‌ ಆಗುತ್ತಿರುವ ಫೋನ್‌ಗಳಿಗೆ ಬೆಂಬಲ ನೀಡದಿರಲು ನಿರ್ಧರಿಸಿದ್ದೇವೆ. ಆದ್ದರಿಂದ ಈ ಫೋನ್‌ಗಳನ್ನು ಬಳಸುವ ಗ್ರಾಹಕರು ಹೊಸ ಒಎಸ್‌ಗೆ ಅಪ್‌ಗ್ರೇಡ್ ಆಗಬೇಕು ಎಂದಿದೆ. ಇನ್ನುಳಿದಂತೆ ಎಲ್ಲಾ ಒಎಸ್‌ಗಳಿಗೂ ಸಪೋರ್ಟ್ ಮಾಡುವುದಾಗಿಯೂ ಹೇಳಿದೆ.

2009ರಲ್ಲಿ ವಾಟ್ಸಾಪ್‌ಕಂಪನಿ ಆರಂಭಗೊಂಡಿದ್ದು, 2009ರ ಫೆಬ್ರವರಿ 9ರಂದು ವಾಟ್ಸಾಪ್‌ ಕಂಪನಿಯನ್ನು 19 ಸತಕೋಟಿ ಡಾಲರ್‌ ನೀಡಿ ಫೇಸ್‌ಬು್ 2014ರಲ್ಲಿ ಖರೀದಿಸಿತ್ತು.

Leave a Reply

Your email address will not be published.

Social Media Auto Publish Powered By : XYZScripts.com