ಹೊಸ ವರ್ಷಕ್ಕೆ ಮತ್ತೊಂದು ಬಂಪರ್ ಆಫರ್ ಬಿಟ್ಟ ಜಿಯೋ….ಏನದು ನೋಡಿ….
ಭರ್ಜರಿ ಆಫರ್ಗಳನ್ನು ಘೋಷಿಸುತ್ತಲೇ ಬಂದಿರುವ ಜಿಯೋ ಈ ಬಾರಿ ಬಂಪರ್ ಆಫರ್ ಒಂದನ್ನು ನೀಡಿದೆ. ಹೊಸ ವರ್ಷದ ಸಂಭ್ರಮಾಚರಣೆಗೆ ಮತ್ತಷ್ಟು ಕಳೆ ಬರುವಂತೆ ಜಿಯೋ ಕಂಪನಿ ಕ್ಯಾಶ್ಬ್ಯಾಕ್ ಆಫರ್ ನೀಡಿದೆ.

ಜಿಯೋ ಗ್ರಾಹಕರು ಹೊಸ ವರ್ಷದ ಉಡುಗೊರೆಯಾಗಿ 3,300 ರೂ ಕ್ಯಾಶ್ ಬ್ಯಾಕ್ ಪಡೆಯಬಹುದು ಎಂದು ಜಿಯೋ ಪ್ರಕಟಿಸಿದೆ. ಜಿಯೋ ಈ ಹಿಂದೆ 2599 ರೂ ಕ್ಯಾಶ್ಬ್ಯಾಕ್ ಆಫರ್ನಂತೆಯೇ ಹೊಸ ವರ್ಷದ ಆಫರ್ ಆಗಿ 3,300 ರೂಗಳ ಕ್ಯಾಶ್ ಬ್ಯಾಕ್ ಆಫರ್ ನೀಡಿದ್ದು, ಜಿಯೋ ಸಿಮ್ಗೆ 399 ರೂಗಳಿಗಿಂತ ಹೆಚ್ಚು ರೀಚಾರ್ಜ್ ಮಾಡಿಸುವವರಿಗಾಗಿ 3300 ರೂವರೆಗೂ ಕ್ಯಾಶ್ಬ್ಯಾಕ್ ಆಫರನ್ನು ಜನವರಿ 15ರವರೆಗೂ ನೀಡಲಾಗಿದೆ.
3300 ರೂಗಳ ಕ್ಯಾಶ್ಬ್ಯಾಕ್ನಲ್ಲಿ 400 ರೂವರೆಗೂ ಜಿಯೋ ವೋಚರ್ ಕ್ಯಾಶ್ ಬ್ಯಾಕ್ ನೀಡಿದೆ. ಜಿಯೋಗೆ ಪ್ರತೀ ಬಾರಿ ರೀಚಾರ್ಜ್ ಮಾಡಿಸುವಾಗಲೂ 50 ರೂಗಳಂತೆ 400ರೂ ಲಾಭ ಗ್ರಾಹಕರಿಗೆ ದೊರೆಯಲಿದೆ.