ಪರಿವಾರದೊಂದಿಗೆ Christmas ಆಚರಣೆ : ಟ್ವಿಟರಿನಲ್ಲಿ ಟೀಕೆಗೆ ಗುರಿಯಾದ Kaif ..!

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಮಹಮ್ಮದ್ ಕೈಫ್ ಕ್ರಿಸ್ಮಸ್ ಪ್ರಯುಕ್ತ ಟ್ವಿಟರಿನಲ್ಲಿ ಶುಭಾಶಯ ಕೋರಿದ್ದು ಕೆಲವರ. ತಮ್ಮ ಪರಿವಾರದೊಂದಿಗೆ ಕ್ರಿಸ್ಮಸ್ ಆಚರಿಸಿರುವ ಫೋಟೊ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಆದರೆ ಕೈಫ್ ಆವರ ಈ ನಡೆ ಕೆಲವರಿಗೆ ಅಸಮಾಧಾನ ಉಂಟು ಮಾಡಿದೆ. ಕೈಫ್ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಕೆಲವರು ಕಟುವಾಗಿ ಟೀಕಿಸಿದ್ದಾರೆ.

‘ ನಮ್ಮದು ಜ್ಯಾತ್ಯಾತೀತ ರಾಷ್ಟ್ರ, ಜ್ಯಾತ್ಯಾತೀತ ಜನ, ಆದರೆ ಇಂತಹ ಕೆಲಸ ಮಾಡುವ ಮೊದಲು ನಮ್ಮ ಧರ್ಮದ ಬಗ್ಗೆ ಯೋಚಿಸಿ ‘ ಎಂದು ಸಲಹೆ ನೀಡಿದ್ದಾರೆ. ‘ ಭಾಯಿಜಾನ್, ಹೊಸ ವರ್ಷವಾಗಿದ್ದರೆ ಪರವಾಗಿರಲಿಲ್ಲ, ಆದರೆ ಇದು ಕ್ರಿಸ್ಮಸ್. ಮುಸಲ್ಮಾನರ ಹಬ್ಬವಲ್ಲ. ಈ ಪೋಸ್ಟ್ ಡಿಲೀಟ್ ಮಾಡಿ ‘ ಎಂದಿದ್ದಾರೆ.

‘ ಕೈಫ್ ಸರ್ ನೀವು ಮುಸ್ಲಿಮ್ ಆಗಿದ್ದುಕೊಂಡು ಮೆರ್ರಿ ಕ್ರಿಸ್ಮಸ್ ಹೇಳಲು ನಾಚಿಕೆಯಾಗುವುದಿಲ್ಲವೇ ‘ ಎಂದು ಕೇಳಿದ್ದಾರೆ. ಮತ್ತೊಬ್ಬ ಟ್ವಿಟರ್ ಫಾಲೋವರ್ ‘ ಮೊಹಮ್ಮದ್ ಅಂತ ಹೆಸರಿಟ್ಟುಕೊಂಡರೆ ಮುಸ್ಲಿಮ್ ಆಗುವುದಿಲ್ಲ ‘ ಎಂದಿದ್ದಾರೆ. ‘ ಮುಸ್ಲಿಮ್ ಆಗಿ ಕ್ರಿಸ್ಮಸ್ ಆಚರಿಸಲು ನಾಚಿಕೆಯಾಗೊಲ್ಲವೆ, ಸ್ವಲ್ಪವಾದರೂ ದೇವರ ಬಗ್ಗೆ ಭಯ ಪಡಿ ‘ ಎಂದಿದ್ದಾರೆ.

 

 

 

 

 

 

 

 

One thought on “ಪರಿವಾರದೊಂದಿಗೆ Christmas ಆಚರಣೆ : ಟ್ವಿಟರಿನಲ್ಲಿ ಟೀಕೆಗೆ ಗುರಿಯಾದ Kaif ..!

  • December 27, 2017 at 2:11 AM
    Permalink

    What’s up, the whole thing is going well here and ofcourse every one is sharing information, that’s actually excellent, keep up writing.

    Reply

Leave a Reply

Your email address will not be published.

Social Media Auto Publish Powered By : XYZScripts.com