ಪಾರ್ಕ್‌ನಲ್ಲಿ ಮಲಗಿದ್ದ ಹಸುಗೂಸಿನ ಮೇಲೆಯೇ ಹರಿದ JCB : ಮಗು ಸಾವು

ದೆಹಲಿ : ಮನೆಯ ಹೊರಗಿನ ಪಾರ್ಕ್‌ನಲ್ಲಿ ನಿದ್ರಿಸುತ್ತಿದ್ದ 9 ತಿಂಗಳ ಮಗುವಿನ ಮೇಲೆ ಜೆಸಿಬಿ ಹರಿದ ಪರಿಣಾಮ ಮಗು ಚಕ್ರದಡಿ ಸಿಲುಕಿ ಮೃತಪಟ್ಟ ಘಟನೆ ದೆಹಲಿಯ ಆರ್‌.ಕೆ ಪುರಂನಲ್ಲಿ ನಡೆದಿದ್ದು, ಚಾಲಕನನ್ನು ಬಂಧಿಸಲಾಗಿದೆ.

ಮಗುವಿನ ತಾಯಿ ಮಗುವನ್ನು ಮಲಗಿಸಿ ಆಟವಾಡಲು ಬಲೂನ್‌ ತರುವ ಸಲುವಾಗಿ ಹೋಗಿದ್ದರು. ಈ ವೇಳೆ ಬಂದ ಜೆಸಿಬಿ ರಿವರ್ಸ್‌ ತೆಗೆದುಕೊಳ್ಳುವ ವೇಳೆ ಮಗುವನ್ನುಬಲಿ ಪಡೆದಿದೆ. ಈ ವೇಳೆ ಚಾಲಕನನ್ನು ಹಿಡಿಯಲು ಹೋದಾಗ ಆತ ಹಾಗೂ ಸಹಾಯಕ ಇಬ್ಬರೂ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ ಎಂದು ಮಗುವಿನ ತಾಯಿ ತಿಳಿಸಿದ್ದಾರೆ.

ಮನೆಯ ಹತ್ತಿರವೇ ಪಾರ್ಕ್‌ ಇದ್ದ ಕಾರಣ ಮಗುವನ್ನು ತಾಯಿ ಹೊರಗೆ ಆಡಲು ಕರೆದುಕೊಂಡು ಹೋಗಿದ್ದಾರೆ. ಆಟವಾಡಿದ ಬಳಿಕ ಮನೆಗೆ ಹೊರಡಬೇಕು ಎನ್ನುವಾಗ ಮಗು ನಿದ್ರೆಗೆ ಜಾರಿದೆ. ಈ ವೇಳೆ ಪಕ್ಕದಲ್ಲೇ ಬಲೂನ್‌ ಮಾರುವವನನ್ನು ನೋಡಿದ ತಾಯಿ ಬಲೂನ್‌ ತರಲು ಹೋಗಿದ್ದಾರೆ. ಈ ವೇಳೆ ಜೆಸಿಬಿಯೊಂದು ಹಿಮ್ಮುಖವಾಗಿ ಚಲಿಸುತ್ತಿದ್ದು, ಮಗುವಿನ ಬಳಿ ಬಂದಿದೆ. ಅದನ್ನು ನೋಡಿದ ತಾಯಿ ಎಷ್ಟೇ ಕೂಗಿಕೊಂಡರು ಚಾಲಕನಿಗೆ ಕೇಳಿಸದೆ ಮಗುವಿನ ಮೇಲೆಯೇ ಜೆಸಿಬಿ ಹರಿಸಿದ್ದಾನೆ ಎಂದು ತಾಯಿ ಅರಚನಾ ಖಾಸಗಿ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಸದ್ಯ ಚಾಲಕನನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com