ನಮ್ಮ ಸರ್ಕಾರಕ್ಕೆ ಯಡಿಯೂರಪ್ಪ ಸರ್ಟಿಫಿಕೇಟ್‌ ಕೊಡೋದು ಬೇಕಾಗಿಲ್ಲ : CM ಸಿದ್ಧರಾಮಯ್ಯ

ದಾವಣಗೆರೆ : ಯಡಿಯೂರಪ್ಪರಿಂದ ನಾನು ಪಾಠ ಕಲಿಯುವ ಅಗತ್ಯವಿಲ್ಲ. ರಾಜ್ಯದ ಆರ್ಥಿಕ ನಿರ್ವಹಣೆ ಹೇಗೆ ಮಾಡಬೇಕೆಂದು ನನಗೆ ಗೊತ್ತಿದೆ ಎಂದು ಸಿಎಂ ಸಿದ್ಧರಾಮಯ್ಯ ಮಾಜಿ ಸಿಎಂ ಬಿಎಸ್‌ವೈ ವಿರುದ್ದ ಕಿಡಿ ಕಾರಿದ್ದಾರೆ.

ಮಂಗಳವಾರ ಹೊನ್ನಾಳಿಯಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಯಡಿಯೂರಪ್ಪಂಗೆ ಹಣಕಾಸು ವ್ಯವಹಾರದ ಬಗ್ಗೆ ಗೊತ್ತಿಲ್ಲ. ಆದರೂ ಅದರ ಬಗ್ಗೆ ಮಾತನಾಡುತ್ತಾರೆ. 2012ರಲ್ಲಿ ನಮ್ಮ ಸರ್ಕಾರ ಫಿಸ್ಕಲ್ ರೆಸ್ಪಾನ್ಸಿಬಿಲಿಟಿ ಆ್ಯಕ್ಟ್‌ ಜಾರಿ ಮಾಡಿದ್ದೇವೆ. ಆರ್ಥಿಕ ಸುಸ್ಥಿತಿ ಬಗ್ಗೆ ನಮಗೆ ಅರಿವಿದೆ. ಆದಾಯ ಹೆಚ್ಚಿರಬೇಕು. ಜಿಡಿಪಿ ಶೇ.25 ರಷ್ಟಿರಬೇಕು. ವಿತ್ತೀಯ ಕೊರತೆ ಶೇ.3 ದಾಟಬಾರದು. ಆದರೆ ಇದನ್ನೆಲ್ಲ ಯಡಿಯೂರಪ್ಪ ಓದಿಕೊಂಡಿಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

ಎರಡು ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ ಅವರು ಸಹ, ರಾಜ್ಯದ ಆರ್ಥಿಕ ಸ್ಥಿರತೆ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. ಅವರೇ ಸರ್ಟಿಫಿಕೇಟ್‌ ಕೊಟ್ಟಮೇಲೆ ನಮಗೆ ಯಡಿಯೂರಪ್ಪ ಸರ್ಟಿಫಿಕೇಟ್‌ ಕೊಡುವುದು ಬೇಕಿಲ್ಲ ಎಂದಿದ್ದಾರೆ.

ಯಡಿಯೂರಪ್ಪ ಅವರ ಮಿಷನ್ 150 ಠುಸ್‌ ಆಗಿದೆ. ಆದ್ದರಿಂದ ಏನೇನೋ ಮಾತನಾಡುತ್ತಾರೆ. ತಮ್ಮ ಬಗ್ಗೆ ಏಕವಚನದಲ್ಲಿ ಮಾತನಾಡುತ್ತಾರೆ. ಅವರ ನಾಲಗೆ ಅವರ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಇನ್ನ ಹೆಗಡೆ ನಾಲಿಗೆಗೆ ಕಡಿವಾಣವೇ ಇಲ್ಲ. ಸಂವಿಧಾನವನ್ನು ಬದಲಿಸ್ತಾರಂತೆ. ಹಾಗೆ ಮಾಡಿದ್ರೆಸ ದೇಶದಲ್ಲಿ ಏಳೋ ದಂಗೆ ಬಗ್ಗೆ ಊಹಿಸಲೂ ಸಾಧ್ಯವಿಲ್ಲ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com