ಎಲ್ಲಾ ಧರ್ಮದವರನ್ನು ಗೌರವಿಸುವವರೇ ಜಾತ್ಯಾತೀತರು : ಹೆಗಡೆ ವಿರುದ್ದ ರೈ ಪತ್ರ ಸಮರ

ಬೆಂಗಳೂರು : ಜಾತ್ಯಾತೀತರಿಗೆ ಅಪ್ಪ ಅಮ್ಮನ ಪರಿಚಯವಿರುವುದಿಲ್ಲ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ  ಅನಂತ್‌ ಕುಮಾರ್ ಹೆಗಡೆ ವಿರುದ್ದ ನಟ ಪ್ರಕಾಶ್‌ ರೈ ಕಿಡಿಕಾರಿದ್ದಾರೆ.
ಈ ಕುರಿತು ಪ್ರಕಾಶ್‌ ರೈ ಅನಂತ್‌ ಕುಮಾರ್‌ ಹೆಗಡೆಯವರಿಗೆ ಪತ್ರ ಬರೆದಿದ್ದು, ಜಾತ್ಯಾತೀತತೆ ಎಂದರೆ ವಿವಿಧ ಧರ್ಮಗಳನ್ನು ಗೌರವಿಸುವುದು ಎಂದರ್ಥ. ಒಬ್ಬ ಜನ ಪ್ರತಿನಿಧಿಯಾಗಿ ಇಂತಹ ಶಬ್ದಗಳು ನಿಮಗೆ ಶೋಭೆ ತರುವುದಿಲ್ಲ. ಹೆಗಡೆ ಇಂತಹ ಹೇಳಿಕೆಯ ಮೂಲಕ ದ್ವೇಷ ಹುಟ್ಟು ಹಾಕುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಈ ಪತ್ರವನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ನಲ್ಲೂ ಪೋಸ್ಟ್ ಮಾಡಿದ್ದು, ಜಾತ್ಯಾತೀತ ಪದದ ಅರ್ಥವನ್ನು ಮೊದಲು ತಿಳಿದುಕೊಳ್ಳಿ. ಜಾತ್ಯಾತೀತ ಎಂದರೆ ವಿವಿಧ ಧರ್ಮಗಳನ್ನು ಗೌರವಿಸುವುದು ಹಾಗೂ ಒಪ್ಪಿಕೊಳ್ಳುವುದು ಎಂಬ ಅರ್ಥವಿದೆ. ಜಾತ್ಯಾತೀತ ಎಂದರೆ ಒಂದು ಧರ್ಮ ಅಥವಾ ನಂಬಿಕೆ ಮೇಲೆ ಗುರುತಿಸಿಕೊಳ್ಳುವುದಲ್ಲ. ಒಬ್ಬ ವ್ಯಕ್ತಿಯ ಪೋಷಕರ ಬಗ್ಗೆ ಇಷ್ಟು ಕೀಳಾಗಿ ಮಾತನಾಡಿದ್ದು, ನಿಜಕ್ಕೂ ನನಗೆ ಆಶ್ಚರ್ಯವಾಗಿದೆ. ಮನುಷ್ಯನ ರಕ್ತ ಆತನ ಧರ್ಮ, ಜಾತಿಯನ್ನು ನಿರ್ಧರಿಸುವುದಿಲ್ಲ. ಜಾತ್ಯಾತೀತ ಎಂದರೆ ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಸೇರದವನು ಎಂದೂ ಅ್ಲ. ಜಾತ್ಯಾತೀತ ಎಂದರೆ ಇತರ ಧರ್ಮಗಳನ್ನು ಗೌರವಿಸುವುದು ಅಷ್ಟೇ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com