107 ನೇ Birthday ಗೆ ರಾ.ಗಾ ಭೇಟಿಯಾಗ್ಬೇಕೆಂದ ಅಜ್ಜಿ : ವಿಷಯ ತಿಳಿದ ರಾಹುಲ್ ಮಾಡಿದ್ದೇನು…?

ದೆಹಲಿ : 107 ವರ್ಷ ವಯಸ್ಸಿನ ವೃದ್ಧೆಯೊಬ್ಬರು ತಮ್ಮ ಹುಟ್ಟುಹಬ್ಬದಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಬಯಸಿದ್ದರು. ಈ ವಿಚಾರವನ್ನು ಅಜ್ಜಿಯ ಮೊಮ್ಮಗಳು ಟ್ವೀಟ್ ಮೂಲಕ ಹಂಚಿಕೊಂಡಿದ್ದರು. ಈ ವಿಚಾರ ಈಗ ರಾಹುಲ್‌ಗಾಂಧಿಗೆ ಮುಟ್ಟಿದ್ದು, ಇದಕ್ಕೆ ರಾ.ಗಾ ಪ್ರತಿಕ್ರಿಯೆ ನೀಡಿದ್ದಾರೆ.

ಸೋಮವಾರ ನನ್ನ ಅಜ್ಜಿಯ 107ನೇ ಹುಟ್ಟುಹಬ್ಬವಿದೆ. ಅವರಿಗಿರುವ ಒಂದೇ ಒಂದು ಆಸೆ ಎಂದರೆ ರಾಹುಲ್ ಗಾಂಧಿಯವರನ್ನು ಭೇಟಿಯಾಗುವುದು. ನಾನು ಯಾಕೆ ಎಂದು ಕೇಳಿದೆ. ಅದಕ್ಕೆ ಅವರು ಮೆಲುದ್ವನಿಯಲ್ಲಿ ಆತ ಹ್ಯಾಂಡ್‌ಸಮ್‌ ಆಗಿದ್ದಾನೆ ಎಂದರು ಎಂದು ಅಜ್ಜಿಯ ಮೊಮ್ಮಗಳು ಟ್ವೀಟ್ ಮಾಡಿದ್ದು, ಅಜ್ಜಿಯ ಫೋಟೋವನ್ನು ಹಾಕಿದ್ದಾರೆ.

ಈ ಪೋಸ್ಟನ್ನು ರಾಹುಲ್‌ ಗಾಂಧಿಯವರಿಗೂ ಟ್ಯಾಗ್ ಮಾಡಿದ್ದರು. ಈ ಟ್ವೀಟ್‌ಗೆ ಕೆಲವೇ ಗಂಟೆಗಳಲ್ಲಿ ರಾಹುಲ್‌ ಗಾಂಧಿ ಪ್ರತಿಕ್ರಿಯಿಸಿದ್ದು, ಡಿಯರ್‌ ದೀಪಾಲಿ, ನಿಮ್ಮ ಸುಂದರವಾದ ಅಜ್ಜಿಗೆ ಹುಟ್ಟುಹಬ್ಬದ ಶುಭಾಷಯಗಳನ್ನು ತಿಳಿಸಿ. ಜೊತೆಗೆ ಕ್ರಿಸ್‌ಮಸ್‌ ಶುಭಾಷಯವನ್ನೂ ತಿಳಿಸಿ. ನನ್ನ ಕಡೆಯಿಂದ ಅವರಿಗೆ ಅಪ್ಪುಗೆ ನೀಡಿ ಎಂದು ಟ್ವೀಟ್‌ ಮಾಡಿದ್ದಾರೆ. ಅಷ್ಟೇ ಅಲ್ಲ, ರಾಹುಲ್‌ ಗಾಂಧಿ ಅದೇ ದಿನ ಸಂಜೆ ಕರೆ ಮಾಡಿ ಅಜ್ಜಿಗೆ ಶುಭಾಷಯ ಕೋರಿದ್ದಾಗಿ ದೀಪಾಲಿ ಟ್ವೀಟ್ ಮಾಡಿದ್ದಾರೆ.

Leave a Reply

Your email address will not be published.