ಕೊಹ್ಲಿ ಕರಿಯರ್ ಬಗ್ಗೆ ವಕಾರ್ ಯೂನಿಸ್ ಭವಿಷ್ಯ : ಪಾಕ್ ಬೌಲರ್ ಹೇಳಿದ್ದೇನು..?

ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಕಾರ್ ಯೂನಿಸ್ ಶ್ರೇಷ್ಟ ಬೌಲರ್ ಗಳಲ್ಲಿ ಒಬ್ಬರು. ಯಾರ್ಕರ್ ಸ್ಪೆಷಲಿಸ್ಟ್ ವಕಾರ್ ಯೂನಿಸ್ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಕ್ರಿಕೆಟ್ ಕರಿಯರ್ ಬಗ್ಗೆ ಭವಿಷ್ಯ ನುಡಿದಿದ್ದಾರೆ.

Image result for virat kohli waqar younis

ಕೊಹ್ಲಿ ಸದ್ಯ ಜಾಗತಿಕ ಕ್ರಿಕೆಟ್ ನಲ್ಲಿರುವ ಅತ್ಯಂತ ಪ್ರತಿಭಾವಂತ ಬ್ಯಾಟ್ಸಮನ್ ಆಗಿದ್ದಾರೆ ಎಂದು ಹೇಳಿರುವ ವಕಾರ್ ‘ ಕೊಹ್ಲಿ ಇದೇ ರೀತಿ ಫಿಟ್ನೆಸ್ ಕಾಯ್ದುಕೊಂಡು ತಮ್ಮ ಕೌಶಲ್ಯಗಳ ಬಗ್ಗೆ ಗಮನ ಹರಿಸಿ ಆಡುತ್ತ ಸಾಗಿದರೆ, ಖಂಡಿತ ಎಲ್ಲ ಬ್ಯಾಟಿಂಗ್ ದಾಖಲೆಗಳನ್ನು ಮುರಿಯಲಿದ್ದಾರೆ. ನನ್ನ ಪ್ರಕಾರ ವಿರಾಟ್ ಬ್ಯಾಟಿಂಗ್ ನಲ್ಲಿ ಹಲವು ರೆಕಾರ್ಡ್ ಗಳನ್ನು ಸೃಷ್ಟಿಸಲಿದ್ದಾರೆ ‘ ಎಂದು ಹೇಳಿದ್ದಾರೆ.

ರನ್ ಮಷಿನ್ ಎಂದೇ ಹೆಸರಾಗಿರುವ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ 9 ಸಾವಿರಕ್ಕೂ ಹೆಚ್ಚು ಹಾಗೂ ಟೆಸ್ಟ್ ನಲ್ಲಿ 5 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com