ಗೋವುಗಳನ್ನು ಸಾಗಿಸಿದರೆ, ಕಡಿದರೆ ಕೊಲೆಯಾಗುತ್ತೀರಿ : ರಾಜಸ್ಥಾನ BJP ಮುಖಂಡ

‘ ಗೋವುಗಳನ್ನು ಸಾಗಾಣಿಕೆ ಮಾಡಿದರೆ, ಗೋವುಗಳನ್ನು ಕಡಿದರೆ ಕೊಲೆಯಾಗಲಿದ್ದೀರಿ ‘ ಎಂದು ರಾಜಸ್ಥಾನದ ಭಾರತೀಯ ಜನತಾ ಪಕ್ಷದ ಮುಖಂಡ ಗ್ಯಾನದೇವ ಅಹುಜಾ ಹೇಳಿದ್ದಾರೆ. ರಾಜಸ್ಥಾನದ ರಾಮಗಢ ಕ್ಷೇತ್ರದ ಶಾಸಕರಾಗಿರುವ ಗ್ಯಾನದೇವ ಅಹುಜಾ ಹೆಚ್ಚಾಗಿ ತಮ್ಮ ವಿವಾದಸ್ಪದ ಹೇಳಿಕೆಗಳಿಂದಲೇ ಗುರುತಿಸಿಕೊಂಡಿದ್ದಾರೆ.

ರಾಜಸ್ಥಾನದ ಆಳ್ವಾರ ಪ್ರದೇಶದಲ್ಲಿ ಶನಿವಾರ ಟ್ರಕ್ ನಲ್ಲಿ ಗೋವುಗಳನ್ನು ಸಾಗಿಸುತ್ತಿದ್ದ ಜಾಕಿರ್ ಖಾನ್ ಎಂಬ ಚಾಲಕನ ಮೇಲೆ ಸ್ಥಳಿಯರು ಹಲ್ಲೆ ನಡೆಸಿದ್ದರು. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಮುಖಂಡ ಗ್ಯಾನದೇವ ಅಹುಜಾ ‘ ನನ್ನ ಪ್ರಕಾರ, ನೀವು ಗೋವುಗಳನ್ನು ಸಾಗಿಸಿದರೆ, ಕಡಿದರೆ, ಹೀಗೆಯೇ ಸಾಯುತ್ತೀರಿ, ಗೊವು ನಮ್ಮೆಲ್ಲರ ತಾಯಿ ‘ ಎಂದು ಹೇಳಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com