ಪಿಶಾಚಿ ಮನಸ್ಸಿನ BJPಯವರನ್ನು ಫಿನಾಯಿಲ್ ಹಾಕಿ ತೊಳೀಬೇಕು : ಸಿಎಂ

‘ ಬಿಜೆಪಿಯವರು ಪಿಶಾಚಿ ಮನಸಿನವರು ಅವರಿಗೆ ಮಾನವಧರ್ಮದಲ್ಲಿ ನಂಬಿಕೆಯಿಲ್ಲ ಮೊಸರಲ್ಲಿ ಕಲ್ಲು ಹುಡುಕೋ ಕೆಲಸ ಮಾಡ್ತಾರೆ ‘ ಅಂತ ಸಿಎಂ ಸಿದ್ದರಾಮಯ್ಯ ಬಿಜೆಪಿ ಮೇಲೆ ಹರಿಹಾಯ್ದಿದ್ದಾರೆ.

ಗದಗನ ಲಕ್ಷ್ಮೇಶ್ವರ ದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಕಾಮಗಾರಿಗಳ ಉದ್ಘಾಟನೆಗೂ ಮುನ್ನಾ ಮಾತನಾಡಿದ ಅವರು ‘ ಮೊದಲು ಬಿಜೆಪಿಯವರನ್ನು ಫಿನಾಯಿಲ್ ಹಾಕಿ ತೊಳೀಬೇಕು ಎಂದು ಆರ್ ಅಶೋಕ್ ನೀಡಿದ್ದ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಕುರಿತು ನನಗೆ ೫ ಅರ್ಜಿಗಳು ಬಂದಿದ್ದು ಅವುಗಳನ್ನು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಕಳಹಿಸಲಾಗಿದೆ. ಲಿಂಗಾಯತ ಪ್ರತ್ಯೇಕ ಧರ್ಮ ಕುರಿತು ಸಮಿತಿ ರಚನೆ ಮಾಡಿದ್ದು ಇಲಾಖೆ ಹೊರತು ನಾನಲ್ಲ. ಸಮಿತಿಯಲ್ಲಿ ಎಲ್ಲವೂ ಸರಿಯಾಗಿದೆ ‘ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

‘ ಗುಜರಾತ್ ಚುನಾವಣೆಯಲ್ಲಿ ಸೋತು ಗೆದ್ದಿದ್ದೇವೆ. ಗುಜರಾತ್ ನಲ್ಲಿ ನೆಟ್ವರ್ಕ್ ಇಲ್ಲದಿದ್ದರೂ ಕಳೆದ ಚುಣಾವಣೆಗಿಂತ ಈ ಬಾರಿ ಹೆಚ್ಚು ಸ್ಥಾನ ಗೆದ್ದಿದ್ದೇವೆ ಎಂದ್ರು. ರಾಹುಲಗಾಂಧಿ ಅವರ ನೇತ್ರತ್ವದಲ್ಲಿ ಕಾಂಗ್ರೇಸ್ ಸಾಕಷ್ಟು ಅಭಿವೃದ್ದಿ ಆಗ್ತಿದೆ ‘ ಎಂದು ಹೇಳಿದರು.

Leave a Reply

Your email address will not be published.