ಬೆಂಗಳೂರು : OLX ನಲ್ಲಿ ಕಾರ್ ಮಾರಲು ಹೋಗಿ ನಾಪತ್ತೆಯಾದ ಟೆಕ್ಕಿ..!

ಬೆಂಗಳೂರಿನಲ್ಲಿ ಪಾಟ್ನಾ ಮೂಲದ ಸಾಫ್ಟ್ ವೇರ್ ಇಂಜಿನಿಯರ್ ಅಜಿತಾಭ್ ಕುಮಾರ್ ಸೋಮವಾರ ನಾಪತ್ತೆಯಾಗಿದ್ದಾರೆ. 29 ವರ್ಷದ ಅಜಿತಾಭ್ ಬ್ರಿಟಿಷ್ ಟೆಲಿಕಾಂ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಅಜಿತಾಭ್ ಕುಮಾರ್ ಆನ್ಲೈನ್ ಮಾರುಕಟ್ಟೆ OLX ನಲ್ಲಿ ಕಾರನ್ನು ಮಾರಬಯಸಿದ್ದರು. olx ಕಾರ್ ಖರೀದಿದಾರನನ್ನು ಭೇಟಿಯಾಗಲು ಅಜಿತಾಭ್ ಕಳೆದ ಸೋಮವಾರ 6.30 ರ ಸುಮಾರಿಗೆ ಮನೆಯಿಂದ ಹೊರಟಿದ್ದರು ಎಂದು ಸ್ನೇಹಿತರು ಶಂಕಿಸಿದ್ದಾರೆ. ಅಜಿತಾಭ್ ಅವರ ಅವರ ಫೋನ್ ಸ್ವಿಚ್ ಆಫ್ ಆಗಿದ್ದು, ವಾಟ್ಸಾಪ್ ನಲ್ಲಿ 7.10 ನಿಮಿಷಕ್ಕೆ ಲಾಸ್ಟ್ ಸೀನ್ ತೋರಿಸಿದೆ.

Image result for ajitabh kumar techie

ತನಿಖೆ ನಡೆಸುತ್ತಿರುವ ಪೋಲೀಸರು ಅಜಿತಾಭ್ ನಿವಾಸದ ಬಳಿಯ ಸಿಸಿಟಿವಿ ಫುಟೇಜ್ ವೀಕ್ಷಿಸುತ್ತಿದ್ದಾರೆ. ಻ಜಿತಾಭ್ ಅವರ ಫೋನನ್ನು ಪೋಲೀಸರು ಟ್ರ್ಯಾಕ್ ಮಾಡಿದಾಗ ಬೆಂಗಳೂರಿನ ಹೊರವಲಯದ ಗುಂಜೂರು ಬಳಿ ಇದ್ದದ್ದು ತಿಳಿದುಬಂದಿದೆ. ಆನಂತರ ಸ್ವಿಚ್ ಆಫ್ ಆಗಿದೆ.

2010 ರಲ್ಲಿ ಬೆಂಗಳೂರಿಗೆ ಬಂದಿದ್ದ ಅಜಿತಾಭ್ ತಮ್ಮ ಬಾಲ್ಯದ ಗೆಳೆಯ ರವಿ ಅವರೊಂದಿಗೆ ವೈಟ್ ಫೀಲ್ಡ್ ಏರಿಯಾದಲ್ಲಿ ನೆಲೆಸಿದ್ದರು. ಕೋಲ್ಕತಾದಲ್ಲಿನ ಎಮ್ ಬಿಎ ಕೋರ್ಸ್ ಗಾಗಿ ಫೀಸ್ ನೀಡಲು 5 ಲಕ್ಷ ರೂಪಾಯಿಗಳ ಅವಶ್ಯಕತೆಯಿದ್ದುರಿಂದ ಅಜಿತಾಭ್ ಕಾರು ಮಾರಾಟಕ್ಕೆ ಮುಂದಾಗಿದ್ದರು ಎನ್ನಲಾಗುತ್ತಿದೆ.

Leave a Reply

Your email address will not be published.

Social Media Auto Publish Powered By : XYZScripts.com