ಇಸ್ಲಾಮಾಬಾದ್ : ತಾಯಿ ಹಾಗೂ ಪತ್ನಿಯನ್ನು ಭೇಟಿಯಾದ ಕುಲಭೂಷಣ್ ಜಾಧವ್

ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಕುಲಭೂಷಣ್ ಜಾಧವ್ ಸೋಮವಾರ ತಮ್ಮ ಹೆಂಡತಿ ಹಾಗೂ ತಾಯಿಯನ್ನು ಇಸ್ಲಾಮಾಬಾದ್ ನಲ್ಲಿ ಭೇಟಿಯಾಗಿದ್ದಾರೆ. ಗಾಜಿನ ಸ್ಕ್ರೀನ್ ಆಚೆಯಿಂದ ಇಂಟರ್ ಕಾಮ್ ಮುಖಾಂತರ ಪರಿವಾರದವರೊಂದಿಗೆ ಮಾತನಾಡಲು ಅವಕಾಶ ನೀಡಲಾಗಿತ್ತು. ಕುಲಭೂಷಣ್ ತಾಯಿ ಅವಂತಿ ಜಾಧವ್ ಹಾಗೂ ಪತ್ನಿ ಚೇತನ್ಕುಲ್ ಜಾಧವ್ ದುಬೈ ಮೂಲಕ ಮಧ್ಯಾಹ್ನ ಇಸ್ಲಾಮಾಬಾದ್ ತಲುಪಿದ್ದರು.

Image result for kulbhushan jadhav meet

ಈ ಸಂದರ್ಭದಲ್ಲಿ ಪಾಕಿಸ್ತಾನದ 5 ಅಧಿಕಾರಿಗಳು ಸ್ಥಳದಲ್ಲಿ ಉಪಸ್ಥಿತರಿದ್ದರು. ಕುಲಭೂಷಣ್ ತಮ್ಮ ಕುಟುಂಬದವರೊಂದಿಗೆ ಮಾತನಾಡುತ್ತಿರುವ ಫೋಟೊ ಅನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಪಾಕಿಸ್ತಾನ ವಿದೇಶಾಂಗ ಕಚೇರಿ ‘ ನಾವು ನಮ್ಮ ಬದ್ಧತೆಯನ್ನು ಗೌರವಿಸುತ್ತೇನೆ ‘ ಎಂದು ಬರೆದುಕೊಂಡಿದೆ.

Leave a Reply

Your email address will not be published.