ಅನಂತಕುಮಾರ್, ಮೊದಲು ನಿಮ್ಮ ತಂದೆ ತಾಯಿ ಯಾರೆಂದು ಹೇಳಿ : ಎಚ್ ವಿಶ್ವನಾಥ್

ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದರ ಬಗ್ಗೆ ಮಾಜಿ ಸಚಿವ ಎಚ್ . ವಿಶ್ವನಾಥ್ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್. ವಿಶ್ವನಾಥ್ ‘ ಅನಂತಕುಮಾರ್ ಹೆಗಡೆ ಮೊದಲು ನಿಮ್ಮ ತಂದೆ ತಾಯಿ ಯಾರೆಂದು ತಿಳಿಸಿ ‘ ಎಂದು ಕೇಳಿದ್ದಾರೆ.

Image result for ananthkumar hegde

ಜ್ಯಾತ್ಯಾತೀತರು ಹಾಗೂ ಬುದ್ಧಿಜೀವಿಗಳನ್ನು ಕುರಿತು ಕೇಂದ್ರ ಸಚಿವ ಅನಂತಕುಮಾರ್ ಅವರ ಹೇಳಿಕೆ ಬಗ್ಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ರಾಜ್ಯದ ಹಲವು ಕಡೆ ಪ್ರತಿಭಟನೆಗಳು ನಡೆದಿವೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಸಾರ್ವಜನಿಕರಿಂದ ಅಪಾರ ಟೀಕೆ ಕೇಳಿ ಬಂದಿತ್ತು. ಅನಂತಕುಮಾರ್ ಅವರನ್ನು ಕೆಂದ್ರ ಸಂಪುಟದಿಂದ ಕೈಬಿಡಬೇಕು ಎಂದು ಆಗ್ರಹಿಸಲಾಗಿತ್ತು.

Leave a Reply

Your email address will not be published.