ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ : ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಕೊಪ್ಪಳ : ಕೇಂದ್ರ ಸಚಿವ ಅನಂತ್ ಕುಮಾರ್  ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲಾತಣದಲ್ಲಿ ಭಾರೀ ಜನಾಕ್ರೋಶ ವ್ಯಕ್ತವಾಗಿದೆ. ಅನಂತಕುಮಾರ್ ಹೆಗಡೆ ನಾಲಿಗೆ ಎಕ್ಕಡ ಎಂದು ಆಕ್ರೋಶ ವ್ಯಕ್ತಪಡಿಸಿ, ಅನಂತಕುಮಾರ್ ಹೆಗಡೆಯನ್ನ ವಿಷಜಂತುವಿಗೆ ಹೋಲಿಸಿದ್ದಾರೆ.

ಅನಂತಕುಮಾರ್ ಹೆಡಗೆಯನ್ನ ಮೋದಿ ಸಂಪುಟದಿಂದ ಕೈಬಿಡಲು ಆಗ್ರಹಿಸಿದ್ದಾರೆ. ಭಾಷಣದ ವೇಳೆ ಕೊಪ್ಪಳ ಸಂಸದರ ಮೌನಕ್ಕೂ ಆಕ್ರೋಶ ಕಂಡುಬಂದಿದ್ದು, ನೈತಿಕ ಹೊಣೆ ಹೊತ್ತು ಕೊಪ್ಪಳ ಲೋಕಸಭಾ ಸಂಸದ ಸಂಗಣ್ಣ ಕರಡಿ ರಾಜಿನಾಮೆಗೆ ಆಗ್ರಹಿಸಲಾಗಿದೆ.

ಇನ್ನು ಕೆಲವು ಜನರು ತಮ್ಮ ರಕ್ತದ ಗುಂಪನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಅನಂತಕುಮಾರ್ ಹೆಗಡೆ ವಿರುದ್ದ ಕಿಡಿಕಾರಿದ್ದಾರೆ. ನಿನ್ನೆ ಅನಂತಕುಮಾರ್ ಹೆಗಡೆ ವಿಚಾರಿವಾದಿಗಳು, ಸಂವಿಧಾನ ದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದನ್ನ ಖಂಡಿಸಿ ಸಾಮಾಜಿಕ ಜಾಲತಾಣ ಫೇಸಬುಕ್ ಅಲ್ಲಿ ಅನಂತಕುಮಾರ್ ವಿರುದ್ದ ಜನಾಕ್ರೋಶ ವ್ಯಕ್ತವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com