ಸಂವಿಧಾನ ಮೊದಲು ಹುಟ್ಟಿದ್ದೋ, ಅನಂತಕುಮಾರ್ ಹೆಗಡೆ ಹುಟ್ಟಿದ್ದೋ : ಸಿಎಂ

ಹುಬ್ಬಳ್ಳಿ : ಗದುಗಿನಲ್ಲಿ ಆಯೋಜಿಸಿದ್ದ ವೀರಶೈವ ಲಿಂಗಾಯದ ಧರ್ಮ ಜನಜಾಗೃತಿ ಸಮಾವೇಶದ ವಿಚಾರವಾಗಿ ದಿಂಗಾಲೇಶ್ವರ ಸ್ವಾಮೀಜಿಗಳ ಹೇಳಿಕೆಗೆ ಸಿಎಂ ತಿರುಗೇಟು ನೀಡಿದ್ದಾರೆ. ‘ನಾನು ಮಾನವೀಯ ಮೌಲ್ಯದಲ್ಲಿ ನಂಬಿಕೆ ಇಟ್ಟಿದ್ದೇನೆ. ರುಂಡ, ಮುಂಡ ಬೇರ್ಪಡಿಸುವ ಸಂಸ್ಕೃತಿ ನಮ್ಮದಲ್ಲ. ನಾವು ಧರ್ಮ ವಿಭಜನೆ ಮಾಡಲು ಹೊರಟಿಲ್ಲ.

ಐದು ಪಿಟೀಷನ್ ಗಳು ಸಲ್ಲಿಕೆಯಾಗಿದ್ವು. ಅವುಗಳನ್ನು ಕಸದ ಬುಟ್ಟಿಗೆ ಹಾಕೋಕೆ ಆಗಲ್ಲ. ಹಾಗಾಗಿ ಸಮಿತಿಯನ್ನ ರಚಿಸಿದ್ದೇವೆ. ಪಕ್ಷಪಾತ ಆಗಬಾರ್ದು ಅನ್ನೋ ಕಾರಣಕ್ಕೆ ಆಯೋಗದಲ್ಲಿ ವೀರಶೈವರನ್ನ ಸೇರಿಸಿಲ್ಲ. ಬಸವಣ್ಣನವರು ಜಾತಿ ರಹಿತ, ಮನುಷ್ಯತ್ವವಿರೋ ಧರ್ಮವಾಗ್ಬೇಕು ಅಂತ ಹೇಳಿದ್ದಾರೆ. ಅವರ ತತ್ವವನ್ನೇ ನಾನು ಅನುಸರಿಸುತ್ತಿದ್ದೇನೆ.

ಅನಂತ್ ಕುಮಾರ್ ಹೆಗಡೆ ವಿರುದ್ಧ ಸಿಎಂ ಹರಿಹಾಯ್ದಿದ್ದಾರೆ. ಅನಂತ ಕುಮಾರ್ ಹೆಗಡೆ ಅವರಿಗೆ ಸಂವಿಧಾನ ಗೊತಿಲ್ಲ. ಸಂವಿಧಾನ ಮೊದಲು ಹುಟ್ಟಿದ್ದೋ, ಅನಂತ ಕುಮಾರ್ ಹೆಗಡೆ ಹುಟ್ಟಿದ್ದೋ…? ಸಾಮಾಜಿಕ ಸಂಸ್ಕ್ರತಿ ಅವರಿಗೆ ಗೊತ್ತಿಲ್ಲ. ಅವರು ಸಂವಿಧಾನ ಬದಲಾವಣೆ ಮಾಡುತ್ತೇನೆ ಎನ್ನುತ್ತಾರೆ. ಆದ್ರೇ, ನಾವು ಜಾತ್ಯಾತೀತ ರಾಷ್ಟ ನಿರ್ಮಾಣ ಮಾಡುತ್ತೇವೆ.

ಅನಂತ ಕುಮಾರ್ ಹೆಗಡೆ ಅವರಿಗೆ ಸಂವಿಧಾನದ ಬಗ್ಗೆ ಕನಿಷ್ಠ ಜ್ಞಾನ ಕೂಡಾ ಇಲ್ಲ. ಮಹಾದಯಿ ಕಳಸಾ ಬಂಡೂರಿ ಯೋಜನೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ‘ ಪರಿಕರ್ ಮತ್ತು ಬಿಎಸ್ ವೈ ಇಬ್ಬರು ನಾಟಕ ಆಡುತಿದ್ದಾರೆ. ಗೋವಾ ಸಿಎಂ ನನಗೆ ಪತ್ರ ಬರೆಯಬೇಕಿತ್ತು. ಆದ್ರೇ, ಅವರು ಯಡಿಯೂರಪ್ಪಗೆ ಪತ್ರ ಬರೆದಿದ್ದಾರೆ. ಅವರಿಗೆ ನೀರು ಕೊಡುವ ಮನಸ್ಸು ಇದ್ದರೆ ಟ್ರಿಬ್ಯೂನಲ್ ಗೆ ಅಫಿಡೆವಿಟ್ ಸಲ್ಲಿಸಲಿ ‘ ಎಂದಿದ್ದಾರೆ.

Leave a Reply

Your email address will not be published.