ಭಾರತದ ಸಂವಿಧಾನವನ್ನು ಅಂಬೇಡ್ಕರ್ ತಪಸ್ಸಿನಿಂದ ರಚಿಸಿದ್ದಾರೆ : ಎಚ್. ಆಂಜನೇಯ

ಕೇಂದ್ರ ಸಚಿವ ಆನಂತ್ ಕುಮಾರ್ ಹೆಗ್ಡೆಯವರ  ಸಂವಿಧಾನ ಬದಲಾಯಿಸಬೇಕೆಂಬ ಹೇಳಿಕೆಗೆ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ತಿರುಗೇಟು ನೀಡಿದ್ದಾರೆ. ‘ ಅಂಬೇಡ್ಕರ್ ತಪ್ಪಸ್ಸಿನಿಂದ ರಚಿಸಿರುವ ಸಂವಿಧಾನ ಭಾರತ ಸಂವಿಧಾನ. ಇದನ್ನು ಬದಲಾಯಿಸಲು ಮುಂದಾದದರೆ ಅದು ಬಿಜೆಪಿ ಅವನತಿ ಆರಂಭವಾಗಲಿದೆ.

‘ಸಂವಿಧಾನ ಒಂದು ಅಕ್ಷರವನ್ನು ಬದಲಾಯಿಸಲು ಆಗಲ್ಲ ನಮ್ಮ ಸಂವಿಧಾನ ಪ್ರಪಂಚವೇ ಮೆಚ್ಚಿದೆ. ಜಾತ್ಯಾತೀತ ಮನೋಬಾವನೆ ಹೊಂದಿದ ಸಾಹಿತಿಗಳು, ಮಠಾಧೀಶರು, ದಾರ್ಶನಿಕರಿದ್ದಾರೆ. ಅವರ ಸಾಧನೆ ಕೊಂಡಾಡಬೇಕೆ ಒರತು ಅವರನ್ನ ಟೀಕೆ ಮಾಡುವ ಸಣ್ಣತನ ತೋರಬಾರದು. ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು ಮರೆತು ಬಿಡುತ್ತಾರೆ’

‘ಸಂವಿಧಾನಾತ್ಮಕವಾಗಿ ಸ್ವೀಕಾರ ಮಾಡಿದ ಪ್ರಮಾಣ ವಚನವನ್ನೇ ಉಲ್ಲಂಘನೆ ಮಾಡಿದ ಮಂತ್ರಿಯನ್ನ ಕರ್ನಾಟಕ ಇತಿಹಾಸದಲ್ಲೇ ಕಂಡಿರಲಿಲ್ಲ. ಕೊಳಕು, ಅಸಂಸದೀಯ, ಅಶ್ಲೀಲ ಪದಗಳನ್ನು ಬಳಕೆಮಾಡಿ ಬಹು ದೊಡ್ಡ ನಾಯಕನಾಗುತ್ತಿನಿ ಎಂಬ ಭ್ರಮೆಯಲ್ಲಿ ಆನಂತ್ ಕುಮಾರ್ ಹೆಗ್ಡೆ ಇದ್ದಾರೆ. ಅವರಿಗೆ ಸಂಸ್ಕಾರ ಇದೆಯೋ ಇಲ್ಲವೋ ಗೊತ್ತಿಲ್ಲ’

‘ನಮಗೆ ಓಟು ಬರುತ್ತೆ ಎಂದು ಆ ರೀತಿ ಮಾತನಾಡು ಎಂದು ಬಿಜೆಪಿಯವರು ಹೇಳಿದ್ದಾರೋ ಏನೋ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಜನರು ಬಿಜೆಪಿಯವರಿಗೆ ತಕ್ಕ ಪಾಠ ಕಲಿಸುತ್ತಾರೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com