ನಮ್ಮಪ್ಪನಾಣೆಗೂ ಯಡಿಯೂರಪ್ಪ CM ಆಗೋದಿಲ್ಲ : ಸಿದ್ದರಾಮಯ್ಯ

ಹುಬ್ಬಳ್ಳಿ : ಕುಂದಗೋಳ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ‘ಕುಂದಗೋಳದಲ್ಲಿ ೧೩೫ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದೇನೆ. ಕುಂದಗೋಳ ಪಟ್ಟಣ ಪಂಚಾಯತ್ ಇದ್ರೂ ಈವರೆಗೂ ಕುಡಿಯೋ ನೀರು ಕೊಟ್ಟಿರಲಿಲ್ಲ. ೨೨ ಸಾವಿರ ಜನಸಂಖ್ಯೆ ಇರೋ ಪಟ್ಟಣಕ್ಕೆ ೫ ಕೋಟಿ ರೂ. ವೆಚ್ಚದಲ್ಲಿ ಕುಡಿಯೋ ನೀರಿನ ಯೋಜನೆ ಜಾರಿಗೆ ತರ್ತಿದ್ದೇವೆ.

ದೇವರಾಜ ಅರಸರನ್ನು ಬಿಟ್ರೇ ಐದು ವರ್ಷ ಆಡಳಿತ ನೀಡಲು ಅವಕಾಶ ಸಿಕ್ಕಿರೋದು ನನಗೆ ಮಾತ್ರ. ಜನರ ನಿರೀಕ್ಷೆ ಹುಸಿಯಾಗದಂತೆ ಜನಪರ ಕೆಲಸ ಕೊಟ್ಟಿದ್ದೇವೆ ಅನ್ನೋ ಬಗ್ಗೆ ನಮಗೆ ಹೆಮ್ಮೆ ಇದೆ. ನುಡಿದಂತೆ ನಡೆದ, ಕೊಟ್ಟ ಮಾತಿನಂತೆ ನಡೆದಿರೋ ಸರ್ಕಾರ ಇದ್ರೇ ಅದು ನಮ್ಮ ಸರ್ಕಾರ- ನಿಮ್ಮ‌ ಸರ್ಕಾರ. ೧೬೫ ಭರವಸೆ ನೀಡಿದ್ದ ಕಾಂಗ್ರೆಸ್ ಅದರಲ್ಲಿ ಬಹುತೇಕ ಈಡೇರಿಸಿದೆ. ಭರವಸೆ ನೀಡದಿದ್ರೂ ಸಾಲಮನ್ನಾ ಮಾಡಿರೋದು ನಮ್ಮ ಸರ್ಕಾರ.

ರಾಜ್ಯದಲ್ಲಿ ೨ ವರ್ಷ ಭೀಕರ ಬರಗಾಲ ಆವರಿಸಿತು. ಕುಂದಗೋಳಕ್ಕೆ ೨ ಸಾರಿ ಬರ ವೀಕ್ಷಣೆಗೆ ಬಂದಿದ್ದೆ. ಹೂಳು ತುಂಬಿದ್ದ ಕೆರೆಗಳು ನಾವು ಮಾಡಿರೋ ಕೆಲಸದಿಂದ ಈಗ ತುಂಬಿವೆ. ಬಿಜೆಪಿಯವರು ಸುಳ್ಳು ಹೇಳಿಕೊಂಡು ತಿರುಗುತ್ತಿದಾರೆ. ಬರೀ ಸುಳ್ಳು ಹೇಳಿ ರಾಜ್ಯ‌ ಸುತ್ತುತ್ತಿದಾರೆ. ಮೂರು ಜನ ಸಿಎಂ ಆಗಿದ್ದ ಬಿಜೆಪಿ ಏನಾದ್ರೂ ಸಾಧನೆ ಮಾಡಿದೆ.

ಮಹದಾಯಿ ಬಗ್ಗೆ‌ ಸಿಹಿ ಸುದ್ದಿ ಕೊಡ್ತೇನೆ‌ ಎಂದವರು ಈಗ ಎಲ್ಲಿ. ಪರಿವರ್ತನಾ ಯಾತ್ರೆಗೆ ಜನ ನಿರೀಕ್ಷೆ ಇಟ್ಕೊಂಡು ಹೋಗಿದ್ರು. ಪತ್ರ ಓದುವ ನಾಟಕ ಮಾಡಿದ ಬಿಜೆಪಿಯವರು. ಗೋವಾ ಸಿಎಂ ಹಾಗೂ ಯಡಿಯೂರಪ್ಪ ‌ಸೇರಿ ನಾಟಕವಾಡಿದ್ರು. ಈಗ ಮನೋಹರ್ ಪರಿಕ್ಕರ್ ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದ್ಮೇಲೆ ಮಾಡ್ತೇವೆ ಅಂತಿದಾರೆ. ಮಹದಾಯಿಗೆ ಪರಿಕ್ಕರ್, ಯಡಿಯೂರಪ್ಪ ಎಳ್ಳು ನೀರು ಬಿಟ್ರು.

ಸಿಎಂ ಆದ್ಮೇಲೆ ಮಹದಾಯಿ ‌ವಿವಾದ ಇತ್ಯರ್ಥಪಡಿಸ್ತೀನಿ ಅಂತ ಯಡಿಯೂರಪ್ಪ ಹೇಳ್ತಿದ್ದಾರೆ. ಯಡಿಯೂರಪ್ಪ ಸಿಎಂ ಆಗ್ತಾರಾ, ನಮ್ ಅಪ್ಪನ್ ಆಣೆ ಯಡಿಯೂರಪ್ಪ ಸಿಎಂ ಆಗೋದಿಲ್ಲ. ಯಡಿಯೂರಪ್ಪ ಅಂಡ್ ಗ್ಯಾಂಗ್ ಅಧಿಕಾರಿದಲ್ಲಿದಾಗ ‌ಜೈಲಿಗೆ ಹೋಗಿದ್ರಲ್ಲ. ಜೈಲಿಗೆ ನಂಟಸ್ತಿಕೆ ಮಾಡೋಕೆ ಹೋಗಿದ್ರಾ? ‘ ಎಂದು ಕೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com