ಸಿದ್ದರಾಮಯ್ಯ ಎಲ್ಲೆಲ್ಲಿ ಹೋಗುತ್ತಾರೋ ಅಲ್ಲಲ್ಲಿ ಶವ ಬೀಳುತ್ತೆ : ಶೋಭಾ ಕರಂದ್ಲಾಜೆ

ವಿಜಯಪುರ‌ : ‘ ಸಿಎಂ ಸಿದ್ಧರಾಮಯ್ಯ ರಾಜ್ಯದಲ್ಲಿ ಎಲ್ಲಲ್ಲಿ ಹೋಗುತ್ತಾರೋ ಅಲ್ಲಲ್ಲಿ ಶವ ಬೀಳುತ್ತೆ ‘ ಎಂದು ಶೋಭಾ ಕರಂದ್ಲಾಜೆ ವಿಜಯಪುರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಾಲಕಿ ಮನೆಗೆ ಭೇಟಿ ನೀಡಿದ ನಂತರ ಅಂಬೇಡ್ಕರ ವೃತ್ತದಲ್ಲಿ ಪ್ರತಿಭಟನೆ ನಂತರ ಈ ರೀತಿ ಹೇಳಿದ್ದಾರೆ. ಅಲ್ಲದೆ ಅಪರಾಧಿಕಗಳಿಗೆ ಸಿಎಂ ಕುಮ್ಮಕ್ಕು ಹಿನ್ನೆಲೆಯಲ್ಲೆ ಇಂತಹ ಅಪರಾಧಗಳು ನಡೆಯುತ್ತಿವೆ ‘ ಎಂದಿದ್ದಾರೆ.
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮೃತ ಸಂತ್ರಸ್ಥೆ ಮನೆಗೆ ಬಿಜೆಪಿ ಮುಖಂಡೆ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದಾರೆ. ಕೃತ್ಯವನ್ನು ಖಂಡಿಸಿದ ಶೋಭಾ ಕರಂದ್ಲಾಜೆ ಪೋಷಕರಿಗೆ ಸಾಂತ್ವನ ಹೇಳಿ ವೈಯುಕ್ತಿಕವಾಗಿ 25,000 ಪರಿಹಾರ ಘೋಷಿಸಿದ್ದಾರೆ.

ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶೋಭಾ ‘ ಘಟನೆ ನೋವಿನ ಸಂಗತಿ. ನಾಗರೀಕ ಸಮಾಜ ತಲೆ ತಗ್ಗಿಸುವಂತಿದೆ. ನಗರದಲ್ಲಿ ಏನು ನಡೆಯುತ್ತಿದೆ, ಕಾನೂನು ಪರಸ್ಥಿತಿ ಏನಾಗಿದೆ. ನಗರದಲ್ಲಿ ಅಫೀಮು ಹಾಗೂ ಗಾಂಜಾ ಪದಾರ್ಥ ಮಾರಾಟವಾಗುತ್ತಿದೆ. ಇದಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ .ಬಾಲಕಿ ಶವ ಮನೆಯಲ್ಲಿ ಹೇಗೆ ಸಿಕ್ಕಿತು ಎಂದು ಪ್ರಶ್ನೆ

ಈ ಕುರಿತು ಗೃಹ ಇಲಾಖೆ ಗಮನ ‌ಹರಿಸಬೇಕು. ಬಾಲಕಿ ಸಾವಿಗೆ ನ್ಯಾಯ ಸಿಗಬೇಕು. ನಿರ್ಭಯಾ ಪ್ರಕರಣದ ಬಳಿಕ ಕ್ರಿಮಿನಲ್ ಅಮೆಂಡ್ಮೆಂಟ್ ಕಾನೂನು ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ತಪ್ಪು ಮಾಡಿದವರಿಗೆ ಗಲ್ಲು ಶಿಕ್ಷೆ ಜಾರಿಯಾಗಬೇಕು. ಇದು ಮೃತ ಬಾಲಕಿಯ ಪೋಷಕರ ಒತ್ತಾಯವೂ ಆಗಿದೆ. ಇಂಥ ಘಟನೆಗಳಲ್ಲಿ ತಪ್ಪು ಮಾಡಿದವರ ಪುರುಷತ್ವ ಹರಣ ಮಾಡುವ ಕಾನೂನು ಜಾರಿಗೆ ತರಬೇಕೆಂದು ಒತ್ತಾಯ ಪಡಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com