ಸಿದ್ದರಾಮಯ್ಯ ಅವರಂತಹ ಜ್ಯಾತ್ಯಾತೀತ ರಾಜಕಾರಣಿ ಸಿಗೋದು ಕಷ್ಟ : ಸಿ ಎಸ್ ಶಿವಳ್ಳಿ

ಹುಬ್ಬಳ್ಳಿ : ಕುಂದಗೋಳದಲ್ಲಿ ನಡೆಯುತ್ತಿರುವ ಸಾಧನಾ ಸಮಾವೇಶದಲ್ಲಿ ಶಾಸಕ ಸಿ.ಎಸ್ ಶಿವಳ್ಳಿ ಹೇಳಿಕೆ ನೀಡಿದ್ದಾರೆ. ‘ ಕುಂದಗೋಳ ನಗರಕ್ಕೆ ಅಭಿವೃದ್ಧಿ ಕಾಮಗಾರಿಗಳಿಗೆ‌ ಚಾಲನೆ ನೀಡಲು ಸಿಎಂ ಬಂದಿರೋದು ನಮ್ ಸೌಭಾಗ್ಯ. ಇತಿಹಾಸದಲ್ಲಿ ಸಿಎಂ ಸಿದ್ದರಾಮಯ್ಯ ‌ಸರ್ಕಾರ ಮಾಡಿದಷ್ಟು ಅಭಿವೃದ್ಧಿ ಯಾರೂ ಮಾಡಿಲ್ಲ. ಸಿದ್ದರಾಮಯ್ಯರಂತ  ಜಾತ್ಯಾತೀತ ರಾಜಕಾರಣಿ ಸಿಗೋದು ಕಷ್ಟ ಅವರ ಕೈಯನ್ನು ಈ ಸಾರಿಯೂ ಬಲಪಡಿಸೋಣ ‘ ಎಂದು ಹೇಳಿದ್ದಾರೆ.

ಬಿಜೆಪಿ‌ ಸರ್ಕಾರ‌ ಇದ್ದಾಗ ಬಿಜೆಪಿ ಮಾಡದ ಕುಡಿಯೋ ನೀರಿಗಾಗಿ ೪೯ಕೋಟಿ ರೂ. ಅನುದಾನವನ್ನು ಸಿಎಂ ನೀಡಿದಾರೆ. ೧೫ ಎಕರೆ ಜಮೀನಿನು ಖರೀದಿಸಿ ೧೦೦೦ ಆಶ್ರಯ ಮನೆ ಕಟ್ಟಿಸಿಕೊಡ್ತಿದ್ದೇವೆ. ಇನ್ನೂ ೨೫ ಎಕರೆ ಜಮೀನು ಖರೀದಿಸಿ ಆಶ್ರಯ ಯೋಜನೆ ಸಫಲಗೊಳಿಸ್ತಿದ್ದೇವೆ. ಕೃಷಿ ಭಾಗ್ಯ ಯೋಜನೆ ಇದೇ ಕುಂದಗೋಳದ ಸಂಶಿ ಗ್ರಾಮದಿಂದಲೇ ಚಾಲನೆ ನೀಡಿದಾರೆ.

೧೬೦೦ ಫಲಾನುಭವಿಗಳು ಕೃಷಿ ಭಾಗ್ಯ ಯೋಜನೆ ಲಾಭ ಪಡೆದಿದಾರೆ. ಹುತಾತ್ಮ ಹನುನಂತಪ್ಪ ಕೊಪ್ಪ ಕುಟುಂಬಕ್ಕೆ ೪ ಎಕರೆ, ೩೦*೪೦ ನಿವೇಶನ ‌ಜತೆಗೆ ೨೫ ಲಕ್ಷ ಅನುದಾನ ನೀಡಿರೋದು ಸಿದ್ದರಾಮಯ್ಯ ಸರ್ಕಾರ. ಗಡಿಯಲ್ಲಿ ೩ ಸಾವಿರ ಸೈನಿಕರು ‌ಸತ್ತಿದ್ರೂ ಮೋದಿ ಏನೂ ಮಾಡಲಿಲ್ಲ. ಸೈನಿಕರು ಗಡಿಯಲ್ಲಿ ಇವತ್ತೂ ಪರದಾಟ ನಡೆಸಿದಾರೆ.

ವೀರಯೋಧ ಹನುಮಂತಪ್ಪ ಕೊಪ್ಪದ್ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದು ಇದೇ ಸಿದ್ದರಾಮಯ್ಯನವರು. ಕಾಂಗ್ರೆಸ್ ಸರ್ಕಾರ ಸ್ವಾತಂತ್ರ್ಯ ತಂದ ಮಹಾತ್ಮ ಗಾಂಧಿ ಅನುಯಾಯಿಗಳು. ಬಿಜೆಪಿಯವರು ಗೋಡ್ಸೆ ಸಂತತಿಯವರು. ಗೋಡ್ಸೆ ಗುಡಿ ಕಟ್ಟಲು ಹೊರಟ್ಟಿದ್ದಾರೆ. ಚುನಾವಣಾ ಬಂದಾಗ ಮಾತ್ರ ಬಿಜೆಪಿಗೆ ಹಿಂದುತ್ವ ನೆನಪಾಗುತ್ತೆ.

ಹಸಿದ ಹೊಟ್ಟೆಗೆ ಅನ್ನಭಾಗ್ಯದ ಮೂಲಕ ತುಂಬಿಸಿದಾರೆ. ರೈತರ ಸಾಲ ಮನ್ನಾ ಮಾಡು ಅಂದ್ರೇ ಅದು ಫ್ಯಾಷನ್ ಅಂತ ಹೇಳಿರೋದು ಬಿಜೆಪಿ. ಸಾಲಮನ್ನಾ ಮಾಡು ಅಂದ್ರೇ ಬರೀ ಡೋಂಗಿತನ ಮಾಡೋದು ಬಿಜೆಪಿ. ಕೇಂದ್ರ‌ ಸರ್ಕಾರದ ನಿಯಂತ್ರಣದಲ್ಲಿರೋ ವಿಮಾ ಕಂಪನಿಗೆ ೧೦ ಸಾವಿರ ಕೋಟಿ ಲಾಭವಾದ್ರೂ ರೈತರಿಗೆ ವಿಮಾ ಹಣ ನೀಡ್ತಿಲ್ಲ.

ಇಂದಿರಾ ಗಾಂಧಿ ಕನಸನ್ನು ನನಸು ಮಾಡಿರೋದು ಸಿದ್ದರಾಮಯ್ಯ ‌ಸಾಹೇಬರು. ಗುಡಿಗೆ ಹೋಗಿ‌ ಎಂದೂ ಕೈಮುಗಿಯದವರು ಹನುಮಂತನ ಮೂರ್ತಿ ಹಿಡಿದು ಅಲೆದಾಡ್ತಾರೆ. ಕನಕಭವನ, ಡಾ. ಬಾಬಾ ‌ಸಾಹೇಬ‌ ಅಂಬೇಡ್ಕರ್ ಭವನಕ್ಕೂ ಕೋಟಿಗಳ ‌ಲೆಕ್ಕದಲ್ಲಿ ಅನುದಾನ ಕೊಟ್ಟಿರೋದು ಸಿದ್ದರಾಮಯ್ಯ ಸಾಹೇಬರು. ಕರ್ನಾಟಕ, ದೇಶ ಕಂಡ ಅಪರೂಪದ ರಾಜಕಾರಣಿ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com