ಚೆನ್ನೈ : RK Nagar ಉಪಚುನಾವಣೆ : ಭಾರೀ ಜಯ ಸಾಧಿಸಿದ TTV ದಿನಕರನ್

ತಮಿಳುನಾಡಿನ ರಾಧಾಕೃಷ್ಣ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಟಿಟಿವಿ ದಿನಕರನ್ ಗೆಲುವು ಸಾಧಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದಿನಕರನ್, ಎಐಎಡಿಎಂಕೆ ಪಕ್ಷದ ಮಧುದೂಧನನ್ ಅವರನ್ನು 40000 ಮತಗಳ ಅಂತರದಿಂದ ಸೋಲಿಸಿದ್ದಾರೆ. ಆಡಳಿತ ಪಕ್ಷವಾಗಿರುವ ಎಐಡಿಎಂಕೆ ಭಾರೀ ಮುಖಭಂಗ ಅನುಭವಿಸಿದೆ.

ದಿನಕರನ್ 89000 ಮತಗಳನ್ನು ಪಡೆದರೆ, ಮಧುಸೂಧನನ್ 48000 ಮತಗಳನ್ನು ಪಡೆದಿದ್ದಾರೆ. ಡಿಎಂಕೆ ಪಕ್ಷದಿಂದ ಸ್ಪರ್ಧಿಸಿದ್ದ ಎನ್ ಮಾರುತು ಗಣೇಶ್ 24000 ಮತಗಳನ್ನು ಪಡೆದಿದ್ದಾರೆ. ದಿನಕರನ್ ಪ್ರೆಷರ್ ಕುಕ್ಕರ್ ಚಿಹ್ನೆಯನ್ನಿಟ್ಟುಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದರು.

ಮಧುರೈನಲ್ಲಿ ಮಾತನಾಡಿದ ದಿನಕರನ್ ‘ ಪಳನಿಸ್ವಾಮಿ ನೇತೃತ್ವದ ಸರ್ಕಾರ ಮೂರು ತಿಂಗಳಲ್ಲಿ ಪತನಗೊಳ್ಳಲಿದೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com