ಉತ್ತರಕನ್ನಡ : KSRTC ಬಸ್ ಪಲ್ಟಿ : ಇಬ್ಬರ ಸಾವು, 10 ಜನರಿಗೆ ಗಾಯ

ಕಾರವಾರ ದಿಂದ ಚಿಕ್ಕಮಂಗಳೂರಿಗೆ ಹೊರಟಿದ್ದ  ಕೆ ಎಸ್ ಆರ್ ಟಿ ಸಿ ಬಸ್ ಬಸ್ ಪಲ್ಟಿಯಾಗಿ ಸ್ಥಳದಲ್ಲೇ ಎರಡು ಜನರು ಸಾವನ್ನಪ್ಪಿದ್ದು, ಹತ್ತು ಜನರಿಗೆ ಗಾಯವಾದ ಘಟನೆ ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೬೬ ರ  ಯಲಗುಪ್ಪಾ ದಲ್ಲಿ ನಡೆದಿದೆ.

ಮೈಸೂರು ಮೂಲದ ವಿದ್ಯಾರ್ಥಿನಿ ಎಂ .ಸಂಗೀತ (೨೦)  , ಹುಬ್ಬಳ್ಳಿ ಮೂಲದ ಮಂಗಳವಾರ ಪೇಠೆ ನಿವಾಸಿ ಪ್ರೀತಮ್ (೯) ಮೃತಪಟ್ಟವರಾಗಿದ್ದು ಗಾಯಗೊಂಡ ಹತ್ತುಜನರಿಗೆ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ನೀಡಲಾಗಿದೆ.

ಬಸ್ ನಲ್ಲಿ ಸುಮಾರು 30 ಜನ ಪ್ರಯಾಣಿಸುತ್ತಿದ್ದು ವೇಗವಾಗಿ ಚಲಿಸುತಿದ್ದಾಗ ಪಲ್ಟಿ ಹೊಡೆದು ಈ ದುರ್ಘಟನೆ ನೆಡೆದಿದೆ. ಘಟನೆಗೆ ಸಂಬಂಧ ಪಟ್ಟಂತೆ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com