Himachal Pradesh : ಮುಖ್ಯಮಂತ್ರಿ ಸ್ಥಾನಕ್ಕೆ ಜೈರಾಮ್ ಠಾಕೂರ್ ಆಯ್ಕೆ ಮಾಡಿದ BJP

ಭಾರತೀಯ ಜನತಾ ಪಕ್ಷ ಜೈರಾಮ್ ಠಾಕೂರ್ ಅವರನ್ನು ಹಿಮಾಚಲ ಪ್ರದೇಶದ ಮುಖ್ಯಮಂತ್ರಿಯನ್ನಾಗಿ ಆಯ್ಕೆ ಮಾಡಿದೆ. ರವಿವಾರ ನಡೆದ ಬಿಜೆಪಿ ಪಕ್ಷದ ಶಾಸಕರ ಸಭೆಯಲ್ಲಿ ಜೈರಾಮ್ ಠಾಕೂರ್ ಹೆಸರನ್ನು ಅಂತಿಮಗೊಳಿಸಲಾಯಿತು. ಸಭೆಯಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಹಾಗೂ ನರೇಂದ್ರ ಸಿಂಗ್ ತೋಮರ್ ಕೂಡ ಉಪಸ್ಥಿತರಿದ್ದರು.

‘ ಜೈರಾಮ್ ಠಾಕೂರ್ ಅವರನ್ನು ಶಾಸಕಾಂಗ ಪಕ್ಷದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿದೆ. ಠಾಕೂರ್ ಅವರ ಹೆಸರನ್ನು ಮಾಜಿ ಮುಖ್ಯಮಂತ್ರಿ ಪ್ರೇಮಕುಮಾರ್ ಧುಮಲ್ ಅವರು ಪ್ರಸ್ತಾಪಿಸಿದರು. ಎಲ್ಲ ಸದಸ್ಯರು ಒಮ್ಮತದಿಂದ ಒಪ್ಪಿಗೆ ಸೂಚಿಸಿದ್ದಾರೆ ‘ ಎಂದು ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

ಸಭೆಯಲ್ಲಿ ಮಾತನಾಡಿದ ಜೈರಾಮ್ ಠಾಕೂರ್ ‘ ಕೇಂದ್ರದ ನಾಯಕರಿಗೆ ಧನ್ಯವಾದಗಳು. ಮುಖ್ಯಮಂತ್ರಿ ಸ್ಥಾನಕ್ಕೆ ನನ್ನ ಹೆಸರನ್ನು ಸೂಚಿಸಿದ ಪ್ರೇಮಕುಮಾರ್ ಧುಮಲ್ ಹಾಗೂ ಬೆಂಬಲಿಸಿದ ಜೆಪಿ ನಡ್ಡಾ, ಶಾಂತಕುಮಾರ್ ಅವರಿಗೆ ಧನ್ಯವಾದಗಳು. ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸೋಣ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com