ಕೋಲಾರದಿಂದ ಡಿ.ಕೆ ರವಿ ತಾಯಿ ಗೌರಮ್ಮ ಚುನಾವಣಾ ಕಣಕ್ಕೆ..?

ಡಿ.ಕೆ ರವಿ ತಾಯಿ ಗೌರಮ್ಮನವರು ಮುಂದಿನ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಚುನಾವಣೆಗೆ ಸ್ಪರ್ಧೆಮಾಡುವ ಕುರಿತು ಜನವರಿ ತಿಂಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದೇನೆ ಎಂದು ಡಿ.ಕೆ.ರವಿ ತಾಯಿ ಗೌರಮ್ಮ ತಿಳಿಸಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್ ನಲ್ಲಿ ಮಾತನಾಡಿದ ಅವರು,’  ನಾನು ಚುನಾವಣೆಗೆ ಸ್ಪರ್ಧಿಸಬೇಕು ಅನ್ನೋದು ಕೋಲಾರ ಜನರ ಒತ್ತಾಸೆಯಾಗಿದೆ. ಜನರೆಲ್ಲಾ ಒಳ್ಳೆ ಮನಸ್ಸಿನಿಂದ ನನ್ನನ್ನು ಬೆಂಬಲಿಸಿದರೆ ಸ್ಪರ್ಧಿಸುವ ಆಸೆಯೂ ಇದೆ. ಆದರೆ ಯಾವುದಕ್ಕೂ  ಜನವರಿ ತಿಂಗಳಲ್ಲಿ ಸ್ಪಷ್ಟ ನಿರ್ಧಾರಕ್ಕೆ ಬರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published.