Cricket : ಧೋನಿ 2019ರ ವಿಶ್ವಕಪ್ ಆಡ್ತಾರಾ..? : ಆಯ್ಕೆ ಸಮಿತಿ ಅಧ್ಯಕ್ಷ ಹೇಳಿದ್ದೇನು..?

ಇಂಗ್ಲೆಂಡಿನಲ್ಲಿ ನಡೆಯಲಿರುವ 2019 ರ ಏಕದಿನ ವಿಶ್ವಕಪ್ ನ ಭಾರತ ತಂಡದಲ್ಲಿ ಧೋನಿ ಆಡಲಿದ್ದಾರಾ..? ಇದು ಬಹುದಿನಗಳಿಂದ ಅಭಿಮಾನಿಗಳ ನಡುವೆ ಚರ್ಚೆಯಾಗುತ್ತಿರುವ ವಿಷಯ. ಬಿಸಿಸಿಐ ಆಯ್ಕೆ ಸಮಿತಿಯ ಅಧ್ಯಕ್ಷ ಎಮ್ ಎಸ್ ಕೆ ಪ್ರಸಾದ್ ಈ ಎಲ್ಲ ಅನುಮಾನ, ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ಧೋನಿ 2019 ರ ವಿಶ್ವಕಪ್ ವರೆಗೆ ತಂಡದಲ್ಲಿ ಮುಂದುವರೆಯಲಿದ್ದಾರೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

Image result for ms dhoni msk prasad

ಶನಿವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪ್ರಸಾದ್ ‘ ನನ್ನ ಪ್ರಕಾರ ಧೋನಿ ಈಗಲೂ ನಂ.1 ವಿಕೆಟ್ ಕೀಪರ್ ಆಗಿದ್ದಾರೆ ಎನಿಸುತ್ತದೆ. ಪ್ರಸಕ್ತ ನಡೆಯುತ್ತಿರುವ ಟಿ20 ಸರಣಿಯಲ್ಲಿ ಧೋನಿಯ ಕ್ಯಾಚಿಂಗ್ ಹಾಗೂ ಸ್ಟಂಪಿಂಗ್ ಅದ್ಭುತವಾಗಿವೆ ‘ ಎಂದಿದ್ದಾರೆ.

‘ ಧೋನಿಯೊಂದಿಗೆ ಯಾರನ್ನೂ ಹೋಲಿಸಲು ಸಾಧ್ಯವಿಲ್ಲ. ಭಾರತೀಯ ಕ್ರಿಕೆಟ್ ಮಾತ್ರವಲ್ಲ, ಸದ್ಯ ಜಾಗತಿಕ ಕ್ರಿಕೆಟ್ ನಲ್ಲಿ ಯಾವೊಬ್ಬ ವಿಕೆಟ್ ಕೀಪರ್ ಕೂಡ ಧೋನಿಯ ಸಾಮರ್ಥ್ಯಕ್ಕೆ ಸನಿಹವೂ ಇಲ್ಲ. ಸಂಜು ಸ್ಯಾಮ್ಸನ್, ರಿಷಭ್ ಪಂತ್ ರಂತಹ ಕಿರಿಯ ವಿಕೆಟ್ ಕೀಪರ್ ಗಳು ಇನ್ನೂ ನಮ್ಮ ನಿರೀಕ್ಷೆಯ ಮಟ್ಟಕ್ಕೆ ಇಲ್ಲ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com