Cricket-3rd T20 : ಭಾರತಕ್ಕೆ 5 ವಿಕೆಟ್ ಜಯ : ಕ್ಲೀನ್ ಸ್ವೀಪ್ ಮಾಡಿದ ಟೀಮ್ ಇಂಡಿಯಾ

ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 5 ವಿಕೆಟ್ ಗಳಿಂದ ಜಯಗಳಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು ತನ್ನದಾಗಿಸಿಕೊಂಡಿರುವ ಭಾರತ ಕ್ಲೀನ್ ಸ್ವೀಪ್ ಮಾಡಿದೆ.

ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತು, ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ನಿಗದಿತ 20 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 135 ರನ್ ಮೊತ್ತ ಸೇರಿಸಿತು. ಶ್ರೀಲಂಕಾದ ಅಸೆಲ ಗುಣರತ್ನೆ 36, ದಸುನ್ ಶಾನಕ 29 ರನ್ ಗಳಿಸಿದರು. ಭಾರತದ ಪರವಾಗಿ ಹಾರ್ದಿಕ್ ಪಾಂಡ್ಯ 2, ಜೈದೇವ್ ಉನಾದ್ಕಟ್ 2, ಮಹಮ್ಮದ್ ಸಿರಾಜ್ 1 ಹಾಗೂ ವಾಷಿಂಗ್ಟನ್ ಸುಂದರ್ 1 ವಿಕೆಟ್ ಪಡೆದರು.

3rd T20I: India Beat Lanka By 5 Wickets To Complete 3-0 Series Sweep

ಗುರಿಯನ್ನು ಬೆನ್ನತ್ತಿದ ಭಾರತ 19.2 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 139 ರನ್ ಸೇರಿಸಿ ಗೆಲುವು ಸಾಧಿಸಿತು. ಭಾರತದ ಮನೀಶ್ ಪಾಂಡೆ 32 ಹಾಗೂ ಶ್ರೇಯಸ್ ಅಯ್ಯರ್ 30 ರನ್ ಗಳಿಸಿದರು. ಲಂಕಾ ಪರವಾಗಿ ದುಶ್ಮಂತ ಚಮೀರಾ ಹಾಗೂ ದಸುನ್ ಶಾನಕ ತಲಾ 2 ವಿಕೆಟ್ ಪಡೆದರು. ಜೈದೇವ್ ಉನದ್ಕಟ್ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.

One thought on “Cricket-3rd T20 : ಭಾರತಕ್ಕೆ 5 ವಿಕೆಟ್ ಜಯ : ಕ್ಲೀನ್ ಸ್ವೀಪ್ ಮಾಡಿದ ಟೀಮ್ ಇಂಡಿಯಾ

  • December 25, 2017 at 5:25 AM
    Permalink

    each time i used to read smaller posts which as well clear their motive, and that is also happening with this paragraph which I am reading here.

    Reply

Leave a Reply

Your email address will not be published.

Social Media Auto Publish Powered By : XYZScripts.com