Mumbai : ಕಾರಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ : ಕ್ಯಾಬ್ ಡ್ರೈವರ್ ಬಂಧನ..!

ಠಾಣೆ ಜಿಲ್ಲೆಯಲ್ಲಿ ಟ್ಯಾಕ್ಸಿ ಚಾಲಕನೊಬ್ಬ ತನ್ನ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಡಿಸೆಂಬರ್ 19 ರಂದು ಸಾಯಂಕಾಲ ಮಹಿಳೆ ಠಾಣೆಯಿಂದ ಕಾಶಿಮಿರಾ ಪ್ರದೇಶಕ್ಕೆ ಕ್ಯಾಬ್ ನಲ್ಲಿ ತೆರಳುತ್ತಿದ್ದರು.

ಆದರೆ ಕ್ಯಾಬ್ ಚಾಲಕ ಸುರೇಶ್, ಮಹಿಳೆಯನ್ನು ವಜ್ರೇಶ್ವರಿ ಎಂಬ ಪ್ರದೇಶಕ್ಕೆ ಕರೆದೊಯ್ದು ಆಕೆಯ ಬಳಿಯಿದ್ದ ಹಣ, ಮೊಬೈಲ್ ಹಾಗೂ ಪರ್ಸ್ ಅನ್ನು ಕಸಿದುಕೊಂಡಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಸಂದರ್ಭದಲ್ಲಿ ಟ್ಯಾಕ್ಸಿ ಚಾಲಕನ ಸ್ನೇಹಿತ ಜೊತೆಗಿದ್ದು, ಸಹಾಯ ಮಾಡಿದ್ದಾನೆ.

ನಂತರ ಇಬ್ಬರೂ ಸೇರಿಕೊಂಡು ಮಹಿಳೆಯನ್ನು ಹತ್ತಿರದ ಲಾಡ್ಜ್ ಒಂದಕ್ಕೆ ಕರೆದೊಯ್ದಿದ್ದಾರೆ. ಮಹಿಳೆ ಲಾಡ್ಜ್ ಮ್ಯಾನೇಜರ್ ಗೆ ನಡೆದ ವಿಷಯ ತಿಳಿಸಿದಾಗ ಚಾಲಕ ಹಾಗೂ ಆತನ ಸ್ನೇಹಿತ ಅಲ್ಲಿಂದ ಪರಾರಿಯಾಗಿದ್ದಾರೆ. ಬಳಿಕ ಮಹಿಳೆ ಪೋಲೀಸರಿಗೆ ದೂರು ನೀಡಿದ್ದರು. ಶನಿವಾರ ಪೋಲೀಸರು ಕ್ಯಾಬ್ ಚಾಲಕ ಸುರೇಶ್ ಗೋಸಾವಿ ಮತ್ತು ಆತನ ಸ್ನೇಹಿತನನ್ನು ಬಂಧಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com