ದೆಹಲಿ : ರೋಹಿಣಿ ಆಶ್ರಮದಿಂದ ಮತ್ತಷ್ಟು ಯುವತಿಯರ ಬಿಡುಗಡೆ : ದೇವಮಾನವ ಪರಾರಿ..!

ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ, ವಿರೇಂದ್ರ ದೇವ ದೀಕ್ಷಿತ ಆಶ್ರಮದಿಂದ ಮತ್ತಷ್ಟು ಯುವತಿಯರನ್ನು ಪೋಲೀಸರು ಬಿಡುಗಡೆಗೊಳಿಸಿದ್ದಾರೆ. ಡಿಸೆಂಬರ್ 21 ರಂದು ಗುರುವಾರವೂ ಸಹ ದಾಳಿ ನಡೆಸಿದ್ದ ಪೋಲೀಸರು 41 ಯುವತಿಯರನ್ನು ಬಿಡುಗಡೆಗೊಳಿಸಿದ್ದರು.

ಸ್ವಯಂ ಘೋಷಿತ ದೇವಮಾನವ ವೀರೆಂದ್ರ ದೀಕ್ಷಿತ ಆಧ್ಯಾತ್ಮಿಕ ವಿಶ್ವವಿದ್ಯಾಲಯ ಹೆಸರಿನ ಆಶ್ರಮವನ್ನು ನಡೆಸುತ್ತಿದ್ದ. ಆಶ್ರಮದಲ್ಲಿ ಯುವತಿಯರನ್ನು ಒತ್ತಾಯದಿಂದ ಕೂಡಿಟ್ಟು ಲೈಂಗಿಕ ಶೋಷಣೆ ನಡೆಸಲಾಗುತ್ತಿದೆ ಎಂದು ಹಲವು ಸ್ಥಳೀಯರು ಆರೋಪಿಸಿದ್ದರು.

ಆಶ್ರಮದಲ್ಲಿನ 22 ಕೋಣೆಗಳ ಪೈಕಿ 13 ಕೋಣೆಗಳಲ್ಲಿ ಯುವತಿಯರನ್ನು ಕೂಡಿಟ್ಟು ಬೀಗ ಹಾಕಲಾಗಿತ್ತು. ದಾಳಿ ನಡೆಸಿದ ಪೋಲೀಸರು ಬೀಗವನ್ನು ಮುರಿದು ಒಳಗಿದ್ದ ಯುವತಿಯರನ್ನು ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾದವರಲ್ಲಿ 3 ಯುವತಿಯರು ಪೋಲೀಸ್ ಅಧಿಕಾರಿಗಳ ಮಕ್ಕಳಾಗಿದ್ದಾರೆ.

ದಾಳಿ ನಡೆಸಿದ ವೇಳೆ ಆಶ್ರಮದಲ್ಲಿ ಮತ್ತು ಬರಿಸುವ ಇಂಜೆಕ್ಷನ್, ಕಾಂಡೋಮ್, ಔಷಧಿಗಳು ಹಾಗೂ ಕೆಲವು ಪತ್ರಗಳು ಪತ್ತೆಯಾಗಿದ್ದು ಪೋಲೀಸರು ಇವುಗಳನ್ನು ವಶಪಡಿಸಿಕೊಂಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com