ಪರಿಕ್ಕರ್ ಪತ್ರ ಓದಿ ಯಡಿಯೂರಪ್ಪ ರೈತರಿಗೆ ಟೋಪಿ ಹಾಕಿದ್ದಾರೆ : ಸಿದ್ದರಾಮಯ್ಯ

ಹಾವೇರಿ : ಮಹಾದಾಯಿ ನೀರು ಹಂಚಿಕೆ ವಿವಾದ ವಿಚಾರವಾಗಿ ಹಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಯಡಿಯೂರಪ್ಪ ರೈತರಿಗೆ ಟೋಪಿ ಹಾಕಿದ್ದಾರೆ.. ಪರಿವರ್ತನಾ ಯಾತ್ರೆಯಲ್ಲಿ ಪರಿಕ್ಕರ್ ಪತ್ರ ಓದಿ ರೈತರಿಗೆ ಟೋಪಿ ಹಾಕಿದ್ದಾರೆ.  ಕಳೆದ ವರ್ಷ ಸೆಪ್ಟೆಂಬರ್ ನಲ್ಲೆ ವಿವಾದದ ಇತ್ಯರ್ಥಕ್ಕಾಗಿ ಮನವಿ ಮಾಡಲಾಗಿತ್ತು. ಆದ್ರೆ ಬಿಜೆಪಿಯವರಿಗೆ ಈಗ ಆ ಬಗ್ಗೆ ನೆನಪಾಗಿದೆ. ಚುನಾವಣೆ ಸಂದರ್ಭದಲ್ಲಿ ಈಗ ವಿವಾದದ ನೆನಪಾಗಿದೆ ‘

‘ ಮಹದಾಯಿ ವಿವಾದಕ್ಕೆ ಗೋವಾ ಕಾಂಗ್ರೆಸ್ ವಿರೋಧ ವಿಚಾರವಾಗಿ ಮಾತನಾಡಿದ ಸಿಎಂ ‘ ಈ ವಿವಾದ ರಾಜಕೀಯ ಪಕ್ಷಗಳ ವಿಚಾರವಲ್ಲ, ಎರಡು ರಾಜ್ಯಗಳ ವಿಚಾರ. ಹೀಗಾಗಿ ಅಲ್ಲಿನ ಕಾಂಗ್ರೆಸ್ ವಿರೋಧಿಸುವುದು ಸಹಜ. ಮಹದಾಯಿ ವಿಚಾರದಲ್ಲಿ ಬಿಜೆಪಿ ನಾಯಕರು ರಾಜಕೀಯ ಮಾಡುತ್ತಿದ್ದಾರೆ ‘

‘ ಸುಳ್ಳು ಹೇಳುವುದು ಯಡಿಯೂರಪ್ಪನ ಖಯಾಲಿ. ಮಹದಾಯಿ ನದಿ ನೀರು ಹಚಿಕೆ ವಿವಾದ ಇತ್ಯರ್ಥಕ್ಕೆ ಪ್ರಧಾನಿ ಮದ್ಯ ಪ್ರವೇಶಿಸಿಬೇಕು. ಅಂದಾಗ ಮಾತ್ರ ಮಹದಾಯಿ ವಿವಾದ ಇತ್ಯರ್ಥ ವಾಗುತ್ತೆ. ಮಹದಾಯಿ ವಿಚಾರದಲ್ಲಿ ರಾಜ್ಯ ಸರ್ಕಾರ ಹತ್ತಾರು ಭಾರಿ ಕೇಂದ್ರದ ಗಮನ ಸೆಳೆದಿದೆ ‘ ಎಂದು ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com