ಶಾಂತಿ ಕದಡುವ ಟ್ವೀಟ್ : ಶೋಭಾ ವಿರುದ್ಧ ಪೋಲೀಸರಿಂದ ಸ್ವಯಂಪ್ರೇರಿತ ದೂರು ದಾಖಲು

ಹೊನ್ನಾವರ: ‘ಹೊನ್ನಾವರದ 9ನೇ ತರಗತಿ ಬಾಲಕಿಯೊಬ್ಬಳ ಮೇಲೆ ಜಿಹಾದಿಗಳು ಅತ್ಯಾಚಾರಕ್ಕೆ ಪ್ರಯತ್ನಿಸಿ, ಕೊಲೆ ಮಾಡಲು ಯತ್ನಿಸಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದ ಆರೋಪದ ಮೇಲೆ ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಪಟ್ಟಣದ ಪೊಲೀಸರು ಶುಕ್ರವಾರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಡಿ.14ರಂದು ಮಾಗೋಡಿನ ಕಾವ್ಯಾ ನಾಯ್ಕ ವೈಯಕ್ತಿಕ ಕಾರಣದಿಂದಾಗಿ ತನ್ನ ಕೈಗೆ ಲಿಂಬೆ ಗಿಡದ ಮುಳ್ಳಿನಿಂದ ಗೀರಿ ಗಾಯಮಾಡಿಕೊಂಡಿದ್ದಳು. ಈ ವಿಚಾರವಾಗಿ ಪಟ್ಟಣದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿತ್ತು.

‘ಬಾಲಕಿ ನೀಡಿದ ದೂರಿನಲ್ಲಿ ಯಾವುದೇ ಧರ್ಮದ ವಿರುದ್ಧ ಆರೋಪ ಮಾಡಿಲ್ಲ. ಕರಂದ್ಲಾಜೆಯವರು ಶಾಂತಿ ಕದಡುವ ಉದ್ದೇಶದಿಂದ ಇಂಥ ಟ್ವೀಟ್ ಮಾಡಿದ್ದಾರೆ. ಇದರಿಂದ ಪಟ್ಟಣದಲ್ಲಿ ಕೋಮು ಸೌಹಾರ್ದ ಹದಗೆಟ್ಟಿದೆ’ ಎಂದು ಉಲ್ಲೇಖಿಸಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

2 thoughts on “ಶಾಂತಿ ಕದಡುವ ಟ್ವೀಟ್ : ಶೋಭಾ ವಿರುದ್ಧ ಪೋಲೀಸರಿಂದ ಸ್ವಯಂಪ್ರೇರಿತ ದೂರು ದಾಖಲು

 • December 23, 2017 at 5:10 PM
  Permalink

  You need to be a part of a contest for one of the finest blogs on the net. I most certainly will recommend this website!

  Reply
 • December 23, 2017 at 5:21 PM
  Permalink

  Greate article. Keep writing such kind of information on your page. Im really impressed by your blog.
  Hey there, You have done a fantastic job. I’ll definitely digg it and in my opinion recommend to my friends. I’m sure they will be benefited from this web site.

  Reply

Leave a Reply

Your email address will not be published.

Social Media Auto Publish Powered By : XYZScripts.com