ಬಹುಕೋಟಿ ಮೇವು ಹಗರಣ : ಲಾಲೂ ಪ್ರಸಾದ್ ದೋಷಿ ಎಂದ CBI ವಿಶೇಷ ನ್ಯಾಯಾಲಯ

ಬಹುಕೋಟಿ ಮೇವು ಹಗರಣದ ಪ್ರಮುಖ ಆರೋಪಿಯಾಗಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ತಪ್ಪಿತಸ್ಥ ಎಂದು ಸಿಬಿಐ ವಿಶೇಷ ನ್ಯಾಯಾಲಯ ಶನಿವಾರ ರಾಂಚಿಯಲ್ಲಿ ತೀರ್ಪು ನೀಡಿದೆ. ಲಾಲೂ ಪ್ರಸಾದ್ ಅವರನ್ನು ಪೋಲೀಸರು ತಮ್ಮ ವಶಕ್ಕೆ ಪಡೆದುಕೊಳ್ಳಲಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲೂ ಪ್ರಸಾದ್ ಯಾದವ್, ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಸೇರಿದಂತೆ ಒಟ್ಟು 19 ಜನರನ್ನು ದೋಷಿ ಎಂದು ತೀರ್ಪು ಪ್ರಕಟಿಸಲಾಗಿದೆ. ಇದು 1991 ರಿಂದ 1994 ರ ನಡುವೆ ದೇವಗಢದ ಖಜಾನೆಯಿಂದ ಸುಮಾರು 85 ಲಕ್ಷ ರೂಪಾಯಿಗಳನ್ನು ದುರುಪಯೋಗ ಪಡಿಸಿಕೊಂಡ ಆರೋಪವನ್ನು ಲಾಲೂ ಎದುರಿಸುತ್ತಿದ್ದರು.

ತೀರ್ಪು ಪ್ರಕಟಣೆಗೊಳ್ಳುವ ಹಿನ್ನೆಲೆಯಲ್ಲಿ, ಆರ್ ಜೆ ಡಿ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಬೆಂಬಲಿಗರು ನ್ಯಾಯಾಲಯದ ಹೊರಗಡೆ ಜಮಾಯಿಸಿದ್ದರು.

 

 

Leave a Reply

Your email address will not be published.

Social Media Auto Publish Powered By : XYZScripts.com