ಚುನಾವಣೆಯಲ್ಲಿ EVM ಕೈಬಿಟ್ಟು ಬ್ಯಾಲೆಟ್ ಪೇಪರ್ ಬಳಸುವುದು ಸೂಕ್ತ : ಮಲ್ಲಿಕಾರ್ಜುನ ಖರ್ಗೆ

ಕಲಬುರ್ಗಿ : ಕಲಬುರ್ಗಿಯಲ್ಲಿ ಕೇಂದ್ರೀಯ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ. ಇವಿಎಂ ಯಂತ್ರಗಳ ಬಗ್ಗೆ ಜನರಿಂದ ಅಪಸ್ವರ ಎದ್ದಿದೆ. ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣೆಗಳ ನಂತರ ಜನರ ಉಂಟಾಗಿರುವ ಅನುಮಾನಗಳು ಬಗೆಹರಿಯಬೇಕೆಂದರೆ ಚುನಾವಣಾ ಆಯೋಗ ಬ್ಯಾಲೆಟ್ ಪೇಪರ್ ಬಳಸುವುದು ಸೂಕ್ತ. ತಂತ್ರಜ್ಞಾನದಲ್ಲಿ ಅತ್ಯಂತ ಮುಂದಿರುವ ಅಮೆರಿಕ ಮತ್ತಿತರ ದೇಶಗಳು ಇವಿಎಂ ಕೈಬಿಟ್ಟು ಬ್ಯಾಲೆಟ್ ಪೇಪರ್ ಗೆ ಮೊರೆ ಹೋಗಿವೆ. ಹೀಗಾಗಿ ಭಾರತದಲ್ಲಿಯೂ ಬ್ಯಾಲೆಟ್ ಪೇಪರ್ ಬಳಸುವುದು ಸೂಕ್ತ ‘ ಎಂದು  ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದಾರೆ.

‘ ಗುಜರಾತ್, ಹಿಮಾಚಲಪ್ರದೇಶ ಚುನಾವಣೆಯ ಗೆಲುವಿಗೆ ಸಾಕಷ್ಟು ಪ್ರಯತ್ನಪಟ್ಟಿದ್ದೇವೆ. ಕಮ್ಮಿ ಅಂತರದಲ್ಲಿಯೇ ಸೋತಿದ್ದೇವೆ. ಅದು ಕಾಂಗ್ರೆಸ್ ಪಕ್ಷದ ಸೋಲಲ್ಲ. ಬಿಜೆಪಿಯ ಗೆಲುವಲ್ಲ. ಆದ್ರೂ ಮುಂದಿನ ಚುನಾವಣೆಗಳನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ ಈಗಾಗಲೇ ಎಐಸಿಸಿ ಅಧ್ತಕ್ಷ ರಾಹುಲ್ ಗಾಂಧಿ ಅವರ ಅಧದತಕ್ಷೆಯಲ್ಲಿ ಕೋರ್ ಕಮಿಟಿ ಸಭೆ ನಡೆಸಿದ್ದೇವೆ. ಮುಂಬರುವ ಚುನಾವಣೆಗಳನ್ನು ಒಗ್ಗಟ್ಟಾಗಿ ಎದುರಿಸುತ್ತೇವೆ ಪ್ರಧಾನಿ ಮೋದಿ ಅವರ ಅಪಪ್ರಚಾರದಿಂದ ಗುಜರಾತ್ ಹಾಗೂ ಹಿಮಾಚಲಪ್ರದೇಶದಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಯ್ತು. ಸುಳ್ಳುಗಳನ್ನೇ ಆಡಿ ಬಿಜೆಪಿ ಗೆಲುವು ಸಾಧಿಸಿದೆ ಗುಜರಾತ್ ನಲ್ಲಿ ಕಾಂಗ್ರೆಸ್ ಸೋಲಲು ಬಿಜೆಪಿಯವರು ಪಾಕಿಸ್ತಾನ ದೊಂದಿಗೆ ಸೇರಿ ಪಿತೂರಿ ನಡೆಸುತ್ತಿದ್ದಾರೆ ‘

‘ ಕಳಸಾ ಬಂಡೋರಿ ವಿಷಯದಲ್ಲಿ ಬಿಜೆಪಿ ರಾಜಕೀಯ ಮಾಡುವುದನ್ನು ಕೈಬಿಡಬೇಕು. ಕರ್ನಾಟಕದ ಪಾಲಿನ ನೀರನ್ನು ಕೊಡಲು ಮುಂದಾಗಬೇಕು. ರಾಜ್ಯದಲ್ಲಿ ಚುನಾವಣೆ ಇದೆ ಎಂಬ ಕಾರಣಕ್ಕೆ ಗೋವಾ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಪತ್ರ ಬರೆಯುವುದು ಆ ಪತ್ರಕ್ಕೆ ಅವರದೇ ಸರ್ಕಾರದ ಸಚಿವರು ವಿರೋಧಿಸುವುದು ಗಿಮಿಕ್ ಎನಿಸುತ್ತವೆ. ಅದನ್ನು ಬಿಟ್ಟು ಪ್ರಧಾನಿ ಮೋದಿ ಸಮಸ್ಯೆ ಇತ್ಯರ್ಥಪಡಿಸುವ ಪ್ರಯತ್ನ ಮಾಡಬೇಕು ‘ ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com