ಕದನ ವಿರಾಮ ಉಲ್ಲಂಘಿಸಿದ ಪಾಕ್ : ಭಾರತೀಯ ಸೇನೆಯ 3 ಯೋಧರ ಸಾವು

ನೆರೆರಾಷ್ಟ್ರ ಪಾಕಿಸ್ತಾನ ಮತ್ತೆ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದು ಕದನ ವಿರಾಮವನ್ನು ಉಲ್ಲಂಘಿಸಿದೆ. ಜಮ್ಮು ಕಾಶ್ಮೀರದ ರಾಜೌರಿಯ ಕೇರಿ ಸೆಕ್ಟರ್ ನಲ್ಲಿದ್ದ ಭಾರತೀಯ ಸೇನಾ ನೆಲೆಯ ಮೇಲೆ ಪಾಕ್ ಸೇನೆ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ಭಾರತೀಯ ಸೇನೆಯ ಓರ್ವ ಅಧಿಕಾರಿ ಹಾಗೂ ಇಬ್ಬರು ಯೋಧರು ಸಾವನ್ನಪ್ಪಿದ್ದಾರೆ.

ಪಾಕಿಸ್ತಾನ ಶನಿವಾರ ಮಧ್ಯಾಹ್ನ 12.15 ರ ಸುಮಾರಿಗೆ ಗುಂಡಿನ ದಾಳಿ ನಡೆಸಿದೆ. ಪಾಕ್ ಫೈರಿಂಗ್ ಮೇಜರ್ ಮೋಹಾರ್ಕರ್ ಪ್ರಫುಲ್ಲಾ ಅಂಬಾದಾಸ್ (32), ಲಾನ್ಸ್ ನಾಯಕ್ ಗುರ್ಮೈಲ್ ಸಿಂಗ್ (34) ಹಾಗೂ ಸಿಪಾಯಿ ಪ್ರಗತ್ ಸಿಂಗ್ ಮೃತ ಪಟ್ಟಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನೆ ಹೇಳಿದೆ.

ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯವರಾಗಿದ್ದ, ಮೋಹಾರ್ಕರ್ ಪ್ರಫುಲ್ಲಾ ಅಂಬಾದಾಸ್ ಪತ್ನಿ ಅವೊಲಿ ಹಾಗೂ ಪರಿವಾರದವರನ್ನು ಅವರನ್ನು ಅಗಲಿದ್ದಾರೆ. ಪಂಜಾಬಿನ ಅಮೃತಸರದ ಗುರ್ಮೈಲ್ ಸಿಂಗ್ ಪತ್ನಿ ಕುಲಜೀತ್ ಕೌರ್ ಹಾಗೂ ಮಗಳನ್ನು ಅಗಲಿದ್ದಾರೆ. ಹರ್ಯಾಣಾದ ಪ್ರಗತ್ ಸಿಂಗ್ ಪತ್ನಿ ರಮನ್ ಪ್ರೀತ್ ಕೌರ್ ಹಾಗೂ ಮಗನನ್ನು ಅಗಲಿದ್ದಾರೆ.

ಪಾಕಿಸ್ತಾನ ಸೇನೆಯ ಮೇಲೆ ಪ್ರತಿಯಾಗಿ ಗುಂಡಿನ ದಾಳಿ ನಡೆಸಿ ತಕ್ಕ  ಪ್ರತ್ಯುತ್ತರ ನೀಡಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ.

Leave a Reply

Your email address will not be published.

Social Media Auto Publish Powered By : XYZScripts.com