ಕಾರ್ಯಕ್ರಮದ ವೇಳೆ ಬೆಂಕಿ ಅನಾಹುತ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಗಾಯ

ಮಂಗಳೂರು : ಬೆಂಕಿ ಅನಾಹುತದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಗಾಯಗೊಂಡಿದ್ದಾರೆ. ಮಂಗಳೂರಿನ ಫೋರಂ ಮಾಲ್ ನಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ.

ಬೈಕ್ ನಲ್ಲಿ ವೇದಿಕೆಗೆ  ಎಂಟ್ರಿಯಾಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ. ಬೈಕ್ ನಲ್ಲಿ ಅಳವಡಿಸಿದ್ದ ಫೈರ್ ಕ್ರಾಕರ್ ತಾಗಿದ ಕಾರಣ ಅರ್ಜುನ್ ಜನ್ಯ ಗಾಯಗೊಂಡಿದ್ದಾರೆ. ಬೆಂಕಿ ತಾಗಿ ಅರ್ಜುನ್ ಜನ್ಯ ಅವರ ಎಡಗೈ ಸಣ್ಣದಾಗಿ ಸುಟ್ಟುಹೋಗಿದೆ.  ಪ್ರಥಮ ಚಿಕಿತ್ಸೆ ಬಳಿಕ ಅರ್ಜುನ್ ಜನ್ಯ ಮತ್ತೆ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com