WATCH : ರಾಜ್ಯಸಭೆಯಲ್ಲಿ ಸಿಗಲಿಲ್ಲ ಅವಕಾಶ : Social Media ದಲ್ಲಿ ಸಚಿನ್ ಹೇಳಿದ್ದೇನು..?

ರಾಜ್ಯಸಭಾ ಸದಸ್ಯರಾಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಗುರುವಾರ ರಾಜ್ಯಸಭೆಗೆ ಆಗಮಿಸಿದ್ದರು. ಆದರೆ ಸದನದಲ್ಲಿ ಇತರ ಸದಸ್ಯರ ಅತಿಯಾದ ಗದ್ದಲದ ನಡುವೆ ಸಚಿನ್ ಗೆ ಮಾತನಾಡಲು ಸಾಧ್ಯವಾಗಲಿಲ್ಲ. ಅಧ್ಯಕ್ಷ ವೆಂಕಯ್ಯ ನಾಯ್ಡು, ಎಲ್ಲರಿಗೂ ಸುಮ್ಮನಿರುವಂತೆ ವಿನಂತಿಸಿಕೊಂಡರೂ ಪ್ರಯೋಜನವಾಗಿರಲಿಲ್ಲ.

ಹಾಗಾಗಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳಲು ಸಚಿನ್ ತೆಂಡೂಲ್ಕರ್ ಸೋಶಿಯಲ್ ಮೀಡಿಯಾ ಮೊರೆ ಹೋಗಿದ್ದಾರೆ. ಫೇಸ್ಬುಕ್ ನಲ್ಲಿ ವಿಡಿಯೋ ಮೂಲಕ ಭಾಷಣ ಮಾಡಿರುವ ಸಚಿನ್ ‘ ಕ್ರೀಡೆಗೆ ಜಗತ್ತನ್ನು ಬದಲಾಯಿಸುವ ಸಾಮರ್ಥ್ಯವಿದೆ. ಜನರಿಗೆ ಪ್ರೇರಣೆ ನೀಡುವ ಶಕ್ತಿ ಕ್ರೀಡೆಯಲ್ಲಿದೆ ‘ ಎಂದು ಹೇಳಿದ್ದಾರೆ.

ದೇಶದ ಕ್ರೀಡೆಯ ಭವಿಷ್ಯ ಹಾಗೂ ಆರೋಗ್ಯದ ವಿಷಯಗಳ ಬಗ್ಗೆ ಮಾತನಾಡಿದ ಸಚಿನ್ ‘ ಗಂಡು ಮಕ್ಕಳಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದಂತೆ ಕುಟುಂಬದ ಹೆಣ್ಣು ಮಕ್ಕಳಿಗೂ ಸಹ ಸಮಾನ ಅವಕಾಶವನ್ನೂ ಕಲ್ಪಿಸಿ ‘ ಎಂದು ಹೇಳಿದ್ದಾರೆ.

India – Sport playing nation

It is my endeavour to transform India from being a sport loving nation to a sport playing nation. I urge you all to participate in this effort and help make my dream, our dream. Always remember, dreams do come true! Jai Hind ????????

Posted by Sachin Tendulkar on Friday, 22 December 2017

 

Leave a Reply

Your email address will not be published.