ಕರಾವಳಿ ಉತ್ಸವಕ್ಕೆ ಪ್ರಕಾಶ್ ರೈ : ಸಾಮಾಜಿಕ ಜಾಲತಾಣದಲ್ಲಿ ಬಲಪಂಥೀಯರ ವಿರೋಧ..!

ಮಂಗಳೂರು : ಗೋ ಬ್ಯಾಕ್ ರೈ! ಬಹುಭಾಷಾ ನಟ ಪ್ರಕಾಶ್ ರೈ ಯನ್ನು ಮತ್ತೆ ಬಲಪಂಥೀಯರು ಟಾರ್ಗೆಟ್ ಮಾಡಿದ್ದಾರೆ. ಇಂದು ಮಂಗಳೂರಿನಲ್ಲಿ ಜಿಲ್ಲಾಡಳಿತದ ವತಿಯಿಂದ ಆರಂಭಗೊಳ್ಳಲಿರೋ ಕರಾವಳಿ ಉತ್ಸವ ಕಾರ್ಯಕ್ರಮವನ್ನ ನಟ ಪ್ರಕಾಶ್ ರೈ ಉದ್ಘಾಟನೆ ಮಾಡ್ತಿರೋದಕ್ಕೆ ಸಾಮಾಜಿಕ ತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.

ಸರ್ಕಾರದ ವತಿಯಿಂದ ನಡೀತಾ ಇರೋ ಕಾರ್ಯಕ್ರಮದ ಉದ್ಘಾಟನೆಗೆ ಪ್ರಕಾಶ್ ರೈ ಆಗಮಿಸುತ್ತಿರುವುದರ ಬಗ್ಗೆ ಹಲವು ಬಲಪಂಥೀಯರು ಫೇಸ್ ಬುಕ್ ಮತ್ತು ವಾಟ್ಸ್ ಅಪ್ ಗಳಲ್ಲಿ ವಿರೋಧ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಪ್ರತೀ ವರ್ಷದಂತೆ ಈ ಬಾರಿಯೂ ಡಿಸೆಂಬರ್ 22ರಿಂದ 31ರ ತನಕ ಕರಾವಳಿ ಉತ್ಸವ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ನಗರದ ಮಂಗಳಾ ಕ್ರೀಡಾಂಗಣ, ಕದ್ರಿ ಪಾರ್ಕ್ ಮತ್ತು ಬೀಚ್ ಗಳಲ್ಲಿ ಉತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಧ್ಯಾಹ್ನ 3 ಗಂಟೆಗೆ ಉತ್ಸವದ ಮೆರವಣಿಗೆ ಆಹಾರ ಸಚಿವ ಖಾದರ್ ಚಾಲನೆ ನೀಡಿ, ವಸ್ತು ಪ್ರದರ್ಶನಕ್ಕೆ ಸಚಿವ ರಮಾನಾಥ್ ರೈ ಚಾಲನೆ ನೀಡಿದ ಬಳಿಕ ಸಂಜೆ 6ಕ್ಕೆ  ಪ್ರಕಾಶ್ ರೈ ಕರಾವಳಿ ಉತ್ಸವ ಉದ್ಘಾಟಿಸಲಿದ್ದಾರೆ.

ಆದರೆ ಇದೀಗ ಸಾಮಾಜಿಕ ತಾಣಗಳಲ್ಲಿ ವಿರೋಧ ವ್ಯಕ್ತವಾಗಿದ್ದು, ಹಿಂದೂ ಧರ್ಮದ ವಿರುದ್ದ ಹೇಳಿಕೆ ನೀಡುವ ಪ್ರಕಾಶ ರೈ ಸರ್ಕಾರದ ಕಾರ್ಯಕ್ರಮ ಉದ್ಘಾಟಿಸ ಬಾರದು ಅಂತ ಹಲವು ಆಕ್ಷೇಪ ಎತ್ತಿದ್ದಾರೆ. ಅಲ್ಲದೇ goback prakash rai ಅನ್ನೋ ಹ್ಯಾಶ್ ಟ್ಯಾಗ್ ನೊಂದಿಗೆ ಅಭಿಯಾನ ಆರಂಭಿಸಿದ್ದಾರೆ. ಈ ನಡುವೆ ಕೆಲ ಹಿಂದೂ ಫೇಸ್ ಬುಕ್ ಪೇಜ್ ಗಳಲ್ಲಿ ಉಗ್ರ ಪ್ರತಿಭಟನೆಯ ಎಚ್ಚರಿಕೆ ಕೂಡ ನೀಡಲಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com