ಹೈದ್ರಾಬಾದ್ : ಮದುವೆಯಾಗಲು ಒಪ್ಪದ ಯುವತಿ : ಬೆಂಕಿ ಹಚ್ಚಿ ಕೊಂದ ಸಹೋದ್ಯೋಗಿ..!

ಮದುವೆಯಾಗಲು ಒಪ್ಪದಿದ್ದಕ್ಕೆ 24 ವರ್ಷದ ಯುವತಿಯನ್ನು ಮಾಜಿ ಸಹೋದ್ಯೋಗಿಯೊಬ್ಬ ಬೆಂಕಿ ಹಚ್ಚಿದ ಭಯಾನಕ ಘಟನೆ ಸಿಕಂದರಾಬಾದ್ ನಲ್ಲಿ ನಡೆದಿದೆ.  ಕೊಲೆಯಾದ ಸಂಧ್ಯಾರಾಣಿ ಕಂಪನಿಯೊಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು.

ಸಂಧ್ಯಾರಾಣಿ ಸಾಯಂಕಾಲ ಸುಮಾರು 6.45 ರ ಹೊತ್ತಿಗೆ ಆಫೀಸಿನಿಂದ ಮನೆಗೆ ತೆರಳುವಾಗ ಬೈಕಿನಲ್ಲಿ ಹಿಂಬಾಲಿಸಿ ಬಂದ, ಮಾಜಿ ಸಹೋದ್ಯೋಗಿ ಸಾಯಿ ಕಾರ್ತಿಕ್ ಅಡ್ಡಗಟ್ಟಿದ್ದಾನೆ.

Image result for hyderabad girl burnt

ಸಂಧ್ಯಾರಾಣಿಗೆ ತನ್ನನ್ನು ಮದುವೆಯಾಗು ಎಂದು ಸಾಯಿ ಕಾರ್ತಿಕ್ ಪೀಡಿಸಿದ್ದಾನೆ. ಆಕೆ ಇದಕ್ಕೆ ಒಪ್ಪದಿದ್ದಾಗ ಬಾಟಲಿಯಿಂದ ಸೀಮೆ ಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಬೆಂಕಿಯಿಂದಾಗಿ ಒದ್ದಾಡುತ್ತಿದ್ದ ಯುವತಿಯನ್ನು ನೋಡಿದ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. 60% ದೇಹದ ಭಾಗ ಸುಟ್ಟುಹೋಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಸಂಧ್ಯಾರಾಣಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.

Leave a Reply

Your email address will not be published.

Social Media Auto Publish Powered By : XYZScripts.com