Cricket : 2nd T20 : ರೋಹಿತ್ ಭರ್ಜರಿ ಶತಕ : ಭಾರತದ ಮಡಿಲಿಗೆ ಸರಣಿ

ಇಂದೋರಿನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ 88 ರನ್ ಗಳಿಂದ ಜಯಗಳಿಸಿದೆ. ಈ ಮೂಲಕ 3 ಪಂದ್ಯಗಳ ಟಿ-20 ಸರಣಿಯನ್ನು ಭಾರತ ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 20 ಓವರುಗಳಲ್ಲಿ 260 ರನ್ ಬೃಹತ್ ಮೊತ್ತ ಸೇರಿಸಿತು. ಇದು ಟಿ-20 ಕ್ರಿಕೆಟ್ ನಲ್ಲಿ ಭಾರತದ ಗರಿಷ್ಟ ಮೊತ್ತವಾಗಿದೆ. ಭರ್ಜರಿ ಶತಕ ಸಿಡಿಸಿದ ನಾಯಕ ರೋಹಿತ್ ಶರ್ಮಾ ಕೇವಲ 43 ಎಸೆತಗಳಲ್ಲಿ 118 ರನ್ ಸಿಡಿಸಿದರು. ರೋಹಿತ್ ತಮ್ಮ ಇನ್ನಿಂಗ್ಸ್ ನಲ್ಲಿ 12 ಬೌಂಡರಿ ಹಾಗೂ 10 ಸಿಕ್ಸರ್ ಬಾರಿಸಿದರು.

Image result for india srilanka 2nd t20 indore

ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದ ಕೆ ಎಲ್ ರಾಹುಲ್ 49 ಎಸೆತಗಳಲ್ಲಿ 89 ರನ್ ಸೇರಿಸಿ ಶತಕ ವಂಚಿತರಾದರು. ರಾಹುಲ್ 5 ಬೌಂಡರಿ ಹಾಗೂ 8 ಸಿಕ್ಸರ್ ಸಿಡಿಸಿದರು. ಲಂಕಾ ಪರವಾಗಿ ನುವಾನ್ ಪ್ರದೀಪ್ ಹಾಗೂ ತಿಸಾರಾ ಪೆರೆರಾ ತಲಾ 2 ವಿಕೆಟ್ ಪಡೆದರು.

ಗುರಿಯನ್ನು ಬೆನ್ನತ್ತಿದ ಶ್ರೀಲಂಕಾ 17.2 ಓವರುಗಳಲ್ಲಿ 172 ಕ್ಕೆ ಆಲೌಟ್ ಆಗಿ 88 ರನ್ ಸೋಲೊಪ್ಪಿಕೊಂಡಿತು. ಲಂಕಾ ಪರವಾಗಿ ಕುಸಾಲ್ ಪೆರೆರಾ 7, ಉಪುಲ್ ತರಂಗಾ 47 ರನ್ ಗಳಿಸಿದರು. ಭಾರತದ ಪರವಾಗಿ ಯಜುವೇಂದ್ರ ಚಹಲ್ 4 ಹಾಗೂ ಕುಲದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದರು. ರೋಹಿತ್ ಶರ್ಮಾ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.

One thought on “Cricket : 2nd T20 : ರೋಹಿತ್ ಭರ್ಜರಿ ಶತಕ : ಭಾರತದ ಮಡಿಲಿಗೆ ಸರಣಿ

  • December 23, 2017 at 9:15 AM
    Permalink

    Do you mind if I quote a few of your articles as long as I provide credit and sources back to your webpage? My blog is in the very same area of interest as yours and my users would genuinely benefit from some of the information you present here. Please let me know if this ok with you. Cheers!

    Reply

Leave a Reply

Your email address will not be published.