‘ ನನ್ನ ಹೆಸರಿನಲ್ಲೇ ರಾಮ ಇದೆ. ಟಿಪ್ಪುಜಯಂತಿ, ರಾಮನವಮಿ ಎರಡನ್ನೂ ಮಾಡ್ತೀವಿ ‘ : CM

ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ‘ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಳಾದಷ್ಟು ಎಲ್ಲಿಯೂ ಆಗಿಲ್ಲ. ಹೀಗಿರುವಾಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಇಲ್ಲಿಗೆ ಬಂದು ನಮಗೆ ಪಾಠ ಹೇಳಬೇಕೇ ? ಕಾನೂನು ಸುವ್ಯವಸ್ಥೆ ಕುರಿತು ಅವರಿಂದ ಪಾಠ ಹೇಳಿಸಿಕೊಳ್ಳುವ ಅಗತ್ಯತೆ ನಮಗಿಲ್ಲ ‘ ಎಂದಿದ್ದಾರೆ.

‘ ನನ್ನ ಹೆಸರಿನಲ್ಲೇ ರಾಮ ಇದೆ. ನಾವು ಟಿಪ್ಪೂ ಜಯಂತಿ ಅಷ್ಟೇ ಅಲ್ಲ, ಹನುಮ ಜಯಂತಿ, ರಾಮನವಮಿಯನ್ನೂ ಮಾಡುತ್ತೇವೆ. ಜೊತೆಗೆ ಬಸವ, ವಾಲ್ಮೀಕಿ, ಕನಕದಾಸರು ಹಾಗೂ ಕಿತ್ತೂರು ರಾಣಿ ಚೆನ್ನಮ್ಮ, ಅವರ ಜಯಂತಿಯನ್ನೂ ಮಾಡುತ್ತೇವೆ. ಇಷ್ಟಕ್ಕೂ ಕೋಮು ಗಲಭೆಯ ಸೃಷ್ಟಿಕರ್ತರೇ ಬಿಜೆಪಿಯವರು. ಅವರಿಂದ ನಾವು ಪಾಠ ಕಲಿಯಬೇಕೇ ? ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com