ದೆಹಲಿಯಲ್ಲಿ ಇಂದು ವಿರುಷ್ಕಾ Reception : ನವದಂಪತಿಗಳಿಂದ ಪ್ರಧಾನಿ ಮೋದಿಗೆ ಆಹ್ವಾನ

ಇತ್ತೀಚೆಗಷ್ಟೆ ಮದುವೆಯಾಗಿರುವ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರ ಆರತಕ್ಷತೆ ಸಮಾರಂಭ ದೆಹಲಿಯಲ್ಲಿ ಗುರುವಾರ ನಡೆಯಲಿದೆ. ಈ ಆರತಕ್ಷತೆ ಕಾರ್ಯಕ್ರಮಕ್ಕೆ ವಿರುಷ್ಕಾ ದಂಪತಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದ್ದಾರೆ.

Image result for virat anushka modi

ಬುಧವಾರ ಮೋದಿಯವರನ್ನು ಭೇಟಿಯಾದ ವಿರಾಟ್ ಕೊಹ್ಲಿ – ಅನುಷ್ಕಾ ಶರ್ಮಾ ಇನ್ವಿಟೇಶನ್ ಕಾರ್ಡ್ ನೀಡಿ ಆಹ್ವಾನಿಸಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯವರ ಹಿರಿಯ ಸೋದರ ವಿಕಾಸ್ ಕೊಹ್ಲಿ ಕೂಡ ಜೊತೆಗಿದ್ದರು. ಮೋದಿ ಹಾಗೂ ವಿರಾಟ್ – ಅನುಷ್ಕಾ ಭೇಟಿಯಾಗಿರುವ ಈ ಚಿತ್ರಗಳನ್ನು ಪ್ರಧಾನಿಯವರ ಟ್ವಿಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.

Image result for virat anushka modi

Image result for virat anushka modi

ಡಿಸೆಂಬರ್ 26 ರಂದು ಮುಂಬೈನಲ್ಲಿ ಮತ್ತೊಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಡಿಸೆಂಬರ್ 11 ರಂದು ಇಟಲಿಯ ಟಸ್ಕನಿಯಲ್ಲಿ ವಿವಾಹವಾಗಿದ್ದರು

 

Leave a Reply

Your email address will not be published.

Social Media Auto Publish Powered By : XYZScripts.com