2ನೇ ಪತ್ನಿಯನ್ನು ಕೊಲ್ಲಲು ಸ್ಕೆಚ್‌ ಹಾಕಿದ್ದ ಪತಿರಾಯ…..ಆದರೆ ಆಗಿದ್ದೇ ಬೇರೆ ?

ಜೈಪುರ : ರಾಜಸ್ತಾನದ ಜಲೋರ್ ಜಿಲ್ಲೆಯಲ್ಲಿ ಎರಡನೇ ಪತ್ನಿಯನ್ನು ಕೊಲ್ಲಲು ಹೋಗಿ ಗಂಡನೊಬ್ಬ ಇಬ್ಬರೂ ಪತ್ನಿಯರನ್ನು ಕಳೆದುಕೊಂಡ ಘಟನೆ ನಡೆದಿದೆ. ಮೃತರನ್ನು ಮಲ್ಯು ದೇವಿ ಹಾಗೂ ದರಿಯಾ ದೇವಿ ಎಂದು ಗುರುತಿಸಲಾಗಿದೆ.

ದೀಪಾರಾಮ್‌ ಎಂಬ ವ್ಯಕ್ತಿಗೆ ಇಬ್ಬರು ಪತ್ನಿಯರು ಮೂವರು ಮಕ್ಕಳಿದ್ದರು. ಮೊದಲ ಪತ್ನಿ ತನ್ನನ್ನನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಆತ ಎರಡನೇ ಮದುವೆಯಾಗಿದ್ದ. ಆದರೆ ಎರಡನೇ ಹೆಂಡತಿ ಜಗಳಗಂಟಿಯಾಗಿದ್ದು, ಮೊದಲ ಹೆಂಡತಿ ಜೊತೆ ಪ್ರತಿನಿತ್ಯ ಜಗಳವಾಡುತ್ತಿದ್ದಳು.

ಇದರಿಂದ ರೋಸಿಹೋಗಿದ್ದ ದೀಪಾರಾಂ ಎರಡನೇ ಪತ್ನಿಯ ಹತ್ಯೆ ಮಾಡಲು ನಿರ್ಧರಿಸಿದ್ದು, ಅದಕ್ಕಾಗಿ ಪೆಟ್ರೋಲ್‌ ಕೂಡ ತಂದಿಟ್ಟುಕೊಂಡಿದ್ದ. ಮಂಗಳವಾರ ಇಬ್ಬರೂ ಪತ್ನಿಯರನ್ನು ಕಾರಿನಲ್ಲಿ ಕರೆದೊಯ್ಯುತ್ತಿರುವ ವೇಳೆ ಎರಡನೇ ಪತ್ನಿ ಮತ್ತೆ ಜಗಳಕ್ಕಿಳಿದಿದ್ದಾಳೆ. ಕೂಡಲೆ ಕಾರಿನಿಂದ ಕೆಳಗಿಳಿದ ದೀಪಾರಾಂ ಕಾರಿನ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ, ಮಗನನ್ನು ಕಾರಿನಿಂದ ಹೊರಗೆಳೆದುಕೊಂಡಿದ್ದಾನೆ. ಮೊದಲನೇ ಪತ್ನಿಯನ್ನು ಕಾಪಾಡಬೇಕು ಎನ್ನುವಷ್ಟರಲ್ಲಿ ಬೆಂಕಿ ಹೆಚ್ಚಿದ್ದು, ಇಬ್ಬರೂ ಹೆಂಡತಿಯರು ಜೀವಂತವಾಗಿ ಸುಟ್ಟು ಕರಕಲಾಗಿದ್ದಾರೆ.

ಬಳಿಕ ಈತ ಪೊಲೀಸರಿಗೆ ಶರಣಾಗಿದ್ದು, ಪತ್ನಿಯರ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

Leave a Reply

Your email address will not be published.

Social Media Auto Publish Powered By : XYZScripts.com