ಅನ್ಯ ಕೋಮಿನ ಜೋಡಿ ಮೇಲೆ ಹಿಂದೂ ಕಾರ್ಯಕರ್ತರ ದಾಳಿ : Viral ಆಯ್ತು ಫೋಟೋ

ಮಂಗಳೂರು : ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ‌ಗಿರಿ ಪ್ರಕರಣ ನಡೆದಿದೆ. ನಗರದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಕಾಣಿಸಿಕೊಂಡ ಅನ್ಯಕೋಮಿನ ಜೋಡಿಯ ಮೇಲೆ ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ ಫೋಟೋಗಳು ಸದ್ಯ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ನಗರದ ಹೊರವಲಯದ ಗುಡ್ಡಗಾಡು ಪ್ರದೇಶಕ್ಕೆ ಬಜಪೆ ನಿವಾಸಿ ಮಹಮ್ಮದ್ ಸಫ್ವಾನ್ ಎಂಬಾತ ಹಿಂದೂ ಹುಡುಗಿಯೊಬ್ಬಳನ್ನ ಕಾರಿನಲ್ಲಿ ಕೂರಿಸಿ ಕರೆ ತಂದಿದ್ದ ಎನ್ನಲಾಗಿದೆ. ಈ ವೇಳೆ ಮಾಹಿತಿ ಅರಿತ ಹಿಂದೂ ಸಂಘಟನೆಯ ಕಾರ್ಯಕರ್ತರು ಅಲ್ಲಿಗೆ ತೆರಳಿ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೇ ಈ ವೇಳೆ ಯುವತಿ ಹಾಗೂ ಯುವಕ ಕ್ಷಮೆಯಾಚಿಸೋ ಫೋಟೋಗಳನ್ನು ತೆಗೆದು ಸಾಮಾಜಿಕ ತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ. ಯುವಕನ ಸ್ವಿಫ್ಟ್ ಕಾರಿನಲ್ಲಿ ವೈದ್ಯರ ಗುರುತು ಚಿಹ್ನೆಯಿದ್ದು, ಆಕೆ ಆತನ ಗೆಳತಿ ಎನ್ನಲಾಗಿದೆ. ಸದ್ಯ ಫೋಟೋ ವೈರಲ್ ಆಗಿದ್ದು, ಅದರಲ್ಲಿ ಯುವಕನ ಡ್ರೈವಿಂಗ್ ಲೈಸನ್ಸ್ ಕೂಡ ಇದೆ. ಅದ್ರ ಆಧಾರದಲ್ಲಿ ಸದ್ಯ ಬಜಪೆ ಪೋಲೀಸರು ಘಟನೆಯ ಮಾಹಿತಿ ಕಲೆ ಹಾಕುವಲ್ಲಿ ನಿರತರಾಗಿದ್ದಾರೆ.

Leave a Reply

Your email address will not be published.