ಸಿದ್ದರಾಮಯ್ಯ ಸರ್ಕಾರಕ್ಕೆ ಟಾಂಗ್‌ ಕೊಟ್ಟ ಮಾದಕ ನಟಿ ಸನ್ನಿ ಲಿಯೋನ್‌….!!

ಬೆಂಗಳೂರು : ಡಿಸೆಂಬರ್‌ 31ರಂದು ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಸನ್ನಿ ನೈಟ್ಸ್‌ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸನ್ನಿ ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರಕ್ಕೆ ಟಾಂಗ್‌ ನೀಡಿದ್ದಾರೆ.

ಕಾರ್ಯಕ್ರಮ ಆಚರಣೆಗ ಅನುಮತಿ ನೀಡದ ವಿಚಾರ ಸಂಬಂಧ ಸನ್ನಿ ಅಭಿಮಾನಿಯೊಬ್ಬ ಟ್ವಿಟರ್‌ನಲ್ಲಿ ಬೇಸರ ವ್ಯಕ್ತಪಡಿಸಿದ್ದ. ಇದಕ್ಕೆ ಪ್ರತಿಕ್ರಿಯಿಸಿರುವ ಸನ್ನಿ ಲಿಯೋನ್‌, ಈ ಬಾರಿ ಎಲೆಕ್ಷನ್‌ನಲ್ಲಿ ಜಾಣತನದಿಂದ ಮತದಾನ ಮಾಡಿ ಎಂದು ಸಿದ್ದರಾಮಯ್ಯ ಸರ್ಕಾರಕ್ಕೆ ಟಾಂಗ್‌ ನೀಡಿದ್ದಾರೆ.

ನನಗೆ ಯುದ್ದಕ್ಕಿಂತ ಪ್ರೀತಿಯಲ್ಲಿ ನಂಬಿಕೆ ಜಾಸ್ತಿ. ಎಲ್ಲದಕ್ಕಿಂತ ಬದುಕು ಮುಖ್ಯ. ನೀವು ಚಲಾಯಿಸುವ ಒಂದೊಂದು ಮತವೂ ಬಲಶಾಲಿಯಾಗಿರುತ್ತದೆ. ಈ ಬಾರಿ ಬುದ್ದಿವಂತಿಕೆಯಿಂದ ಮತದಾನ ಮಾಡಿ ಎಂದು ಸನ್ನಿ ರೀಟ್ವೀಟ್‌ ಮಾಡಿದ್ದಾರೆ.

ಸನ್ನಿಯ ಈ ಟ್ವೀಟ್‌ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಸಂಚಲನ ಮೂಡಿಸಿದ್ದು. ಚರ್ಚೆಗೆ ಗ್ರಾಸವಾಗಿದೆ. ಒಂದಷ್ಟು ಮಂದಿ ಸನ್ನಿ ಪರ ಮಾತನಾಡಿದ್ದರೆ, ಮತ್ತೊಂದಷ್ಟು ಮಂದಿ ಬಿಜೆಪಿ ಪ್ರಚಾರ ಮಾಡಲು ಮತ್ತೊಂದು ಕ್ಯಾಂಡಿಡೇಟ್‌ ಸಿದ್ಧವಾಗಿದೆ ಎಂದು ಟ್ರೋಲ್‌ ಮಾಡಿದ್ದಾರೆ. ಮತ್ತೊಂದೆಡೆ ಅಧಿವೇಶನದ ವೇಳೆ ನೀಲ ಚಿತ್ರ ನೋಡುವ ಮಂದಿಗೆ ಸನ್ನಿ ಲಿಯೋನ್‌ ಕುಣಿದರೆ ತಪ್ಪು ಎನ್ನವ ಅಧಿಕಾರವಿಲ್ಲ ಎಂದು ರಾಜಕಾರಣಿಗಳ ವಿರುದ್ಧ ಗುಡುಗಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com