Ranaji Semifinal : ಗೆಲುವಿನ ಹೊಸ್ತಿಲಲ್ಲಿ ಎಡವಿದ ಕರ್ನಾಟಕ : ಫೈನಲ್ ಕನಸು ಭಗ್ನ

ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ರಣಜಿ ಟ್ರೋಫಿಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ, ವಿದರ್ಭ ವಿರುದ್ಧ 5 ರನ್ ಸೋಲು ಅನುಭವಿಸಿದೆ. ಈ ಮೂಲಕ ವಿನಯ್ ಕುಮಾರ್ ಪಡೆಯ ಫೈನಲ್ ಪ್ರವೇಶಿಸುವ ಕನಸು ಭಗ್ನಗೊಂಡಿದೆ. ಫೈಜ್ ಫಜಲ್ ನೇತೃತ್ವದ ವಿದರ್ಭ ತಂಡ ರಣಜಿ ಟ್ರೋಫಿ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದೆ.

ಗುರುವಾರ ನಡೆದ 5 ನೇ ದಿನದಾಟದಲ್ಲಿ ಕರ್ನಾಟಕ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 192 ಕ್ಕೆ ಆಲೌಟ್ ಆಯಿತು. ಕರ್ನಾಟಕದ ಪರವಾಗಿ ವಿನಯ್ ಕುಮಾರ್ 36, ಅಭಿಮನ್ಯು ಮಿಥುನ್ 33, ಶ್ರೇಯಸ್ ಗೋಪಾಲ್ 24* ರನ್ ಗಳಿಸಿದರು. ವಿದರ್ಭ ಪರವಾಗಿ ಮಾರಕ ದಾಳಿ ನಡೆಸಿದ ರಜನೀಶ್ ಗುರ್ಬಾನಿ 7 ವಿಕೆಟ್ ಪಡೆದು ಮಿಂಚಿದರು. ಎರಡನೇ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ಪಡೆದು ವಿದರ್ಭ ಗೆಲುವಿಗೆ ಕಾರಣರಾದ ರಜನೀಶ್ ಗುರ್ಬಾನಿ ಪಂದ್ಯಶ್ರೇಷ್ಟ ಪ್ರಶಸ್ತಿಯನ್ನು ಪಡೆದರು.

ಡಿಸೆಂಬರ್ 29 ರಿಂದ ಆರಂಭವಾಗಲಿರುವ ಫೈನಲ್ ನಲ್ಲಿ ದೆಹಲಿ ಹಾಗೂ ವಿದರ್ಭ ತಂಡಗಳು ರಣಜಿ ಟ್ರೋಫಿಗಾಗಿ ಸೆಣಸಾಡಲಿವೆ.

Leave a Reply

Your email address will not be published.

Social Media Auto Publish Powered By : XYZScripts.com