BIGG BOSS : ‘ಬಿಗ್’ ಮನೇಲಿ ಹೈಡ್ರಾಮಾ ಮಾಡಿದ ಸಂಯುಕ್ತಾ ಬಗ್ಗೆ ಪ್ರಥಮ್ ಹೇಳಿದ್ದೇನು..?

ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಸಮೀರಾಚಾರ್ಯ ಅವರಿಗೆ ಕಪಾಳ ಮೋಕ್ಷ ಮಾಡಿದ್ದ ಸಂಯುಕ್ತಾ ಹೆಗಡೆ ಕುರಿತು ಒಳ್ಳೆ ಹುಡುಗ ಪ್ರಥಮ್ ಪ್ರತಿಕ್ರಿಯೆ ನೀಡಿದ್ದಾರೆ.

ಸಂಯುಕ್ತಾ, ಸಮೀರಾಚಾರ್ಯ ಅವರ ಕಪಾಳಕ್ಕೆ ಹೊಡೆದ ವಿಚಾರ ತಿಳಿಯಿತು. ಬಿಗ್‌ಬಾಸ್‌ ಜೀವನದ ಪಾಠವನ್ನು ಕಲಿಸುತ್ತದೆ. ನಮ್ಮ ಬಗ್ಗೆ ನಮಗೇ ಅರ್ಥವಾಗುತ್ತಾ ಹೋಗುತ್ತದೆ. ಆದರೆ ಸಂಯುಕ್ತಾ ತಮ್ಮನ್ನು ತಾವು ಥ್ರಿಲ್ಲರ್‌ ಮಂಜು ತಂಗಿನೋ, ಬ್ರೂಸ್ಲಿ ಅವರ ಬಾಮೈದ ಎಂದು ತಿಳಿದೋ ಸಮೀರಾಚಾರ್ಯ ಅವರ ಮೇಲೆ ಕೈ ಮಾಡಿದ್ದಾರೆ ಎನಿಸುತ್ತದೆ. ಆದರೆ ಇದ್ಯಾಕೋ ನನಗೆ ಸರಿಕಾಣುತ್ತಿಲ್ಲ ಎಂದಿದ್ದಾರೆ.

ಬಿಗ್‌ಬಾಸ್‌ ಮನೆಗೆ ಹೋಗುವ ಮುನ್ನ ನೀವು ನೀವಾಗಿರಿ ಎಂದು ಹೇಳುತ್ತಾರೆ. ಬಿಗ್‌ಬಾಸ್‌ ಶೋಗೆ ಅದರದ್ದೇ ಆದ ಸಂವಿಧಾನವಿದೆ. ಯಾರ ಮೇಲೆಯೂ ಕೈ ಮಾಡುವ ಅಧಿಕಾರವಿಲ್ಲ. ನಾಮಿನೇಶನ್‌ ಬಗ್ಗೆ ಮಾತನಾಡುವಂತಿಲ್ಲ. ಈ ರೀತಿಯ ಶಿಸ್ತುಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗುತ್ತದೆ.

ಸಹಸ್ಪರ್ಧಿಗಳೊಂದಿಗೆ ಜಗಳ ಆಡಿ, ಊಟ ಬಿಟ್ಟು ಏನೇ ಮಾಡಿದರು ಅದು ನಿಮ್ಮ ವೈಯಕ್ತಿಕ ವಿಚಾರ. ಆಟ ಹಾಗೂ ನಮ್ಮ ನಡವಳಿಕೆ ಮಾತ್ರ ನಮ್ಮನ್ನು ಅಲ್ಲಿ ಉಳಿಸುತ್ತದೆ. ಸಮೀರಾಚಾರ್ಯ ಶಿಸ್ತಿನಿಂದ ಅಲ್ಲಿ ಆಟವಾಡುತ್ತಿದ್ದಾರೆ. ಸಮೀರ್ ಅವರಿಗೆ ಮದುವೆಯಾಗಿದೆ. ದೊಡ್ಡವರ ಮೇಲೆ ಚಿಕ್ಕವರು ಕೈ ಮಾಡಿದ್ದು ತಪ್ಪು. ಜನ ಸಂಯುಕ್ತಾರನ್ನು ಕ್ಷಮಿಸಲಿ ಎಂದಷ್ಟೇ ನಾನು ಕೇಳಿಕೊಳ್ಳಬಹುದು ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com