ವೇಶ್ಯಾವಾಟಿಕೆ ದಂಧೆ : ಇಬ್ಬರು ಖ್ಯಾತ ನಟರ ಹೆಸರು ಶಾಮೀಲು…??!!

ಬೆಂಗಳೂರು : ಮೈಸೂರು ಬೋಗಾದಿ ರಸ್ತೆಯಲ್ಲಿರುವ ಸಲೂನ್‌ ಒಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು ಸಲೂನ್‌ನ ಮಾಲಿಕ ಹಾಗೂ ಆತನ ಪತ್ನಿಯನ್ನು ಬಂಧಿಸಲಾಗಿದೆ. ಬಂಧಿತರ ವಿಚಾರಣೆ ನಡೆಸಿದಾಗ ಇಬ್ಬರು ಪ್ರಖ್ಯಾತ ನಟರು ಈ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂಬ ಸತ್ಯ ಬಾಯ್ಬಿಟ್ಟಿದ್ದಾರೆ.

 

ದಾಳಿಯ ವೇಳೆ ಪಾಂಡವರಪುರದ ಮೂಲದ 23 ವರ್ಷದ ಯುವತಿ ಪತ್ತೆಯಾಗಿದ್ದು, ಆಕೆಯ ವಿಚಾರಣೆ ನಡೆಸಿದ ವೇಳ ಸ್ಪೋಟಕ ಸತ್ಯ ಹೊರಬಿದ್ದಿದೆ. ನಾನು ಸಲೂನ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಬಾಡಿ ಮಸಾಜ್‌ ಮಾಡುವ ಟ್ರೈನಿಂಗ್ ನೀಡಲಾಗಿತ್ತು. ಆದರೆ ಬಾಡಿ ಮಸಾಜ್‌ ಮಾಡುವಾಗ ಕಸ್ಟಮರ್‌ ಜೊತೆ ಸ್ವಲ್ಪ ಅಡ್ಜೆಸ್ಟ್ ಮಾಡಿಕೋ ಎನ್ನುತ್ತಿದ್ದರು. ಆದರೆ ನನಗೆ ಅದು ಇಷ್ಟವಿರಲಿಲ್ಲ ಎಂದು ಹೇಳಿದ್ದೆ. ಆಗಿನಿಂದ ನನ್ನ ಫೋನ್‌ ಕಸಿದುಕೊಂಡಿದ್ದಲ್ಲದೆ, ನನ್ನನ್ನು ಮನೆಗ ಹೋಗಲು ಬಿಡುತ್ತಿರಲಿಲ್ಲ ಎಂದು ಯುವತಿ ಪೊಲೀಸರ ಮುಂದೆ ಹೇಳಿದ್ದಾಳೆ. ಆದರೆ ಸಲೂನ್‌ ಮ್ಯಾನೇಜರ್‌ ಚಿತ್ರ ನಟರ ಜೊತೆ ಸೆಲ್ಫಿ ಪಡೆದು ಸಲೂನ್‌ಗೆ ಹೈಪ್‌ ಕ್ರಿಯೇಟ್ ಮಾಡುತ್ತಿದ್ದ ಎಂದು ಯುವತಿ ಹೇಳಿದ್ದಾಳೆ. ಸದ್ಯ ರಕ್ಷಿಸಲಾದ ಯುವತಿಯನ್ನು ನ್ಯಾಯಾಧೀಶರ ಮುಂದೆಹಾಜರು ಪಡಿಸಲಿದ್ದು, ಈ ವೇಳೆ ಯುವತಿ ನ್ಯಾಯಾಧೀಶರ ಮುಂದೆ ನೀಡುವ ಹೇಳಿಕೆಯಿಂದ ಇಬ್ಬರು ಚಲನಚಿತ್ರ ನಟರ ಅಸಲಿ ಬಣ್ಣ ಬಯಲಾಗಲಿದೆ.

 

 

Leave a Reply

Your email address will not be published.