ಮಹದಾಯಿ ವಿವಾದ : ಉಲ್ಟಾ ಹೊಡೆದ ಗೋವಾ ಸಿಎಂ ಮನೋರ್‌ ಪರ್ರಿಕ್ಕರ್‌….ಹೇಳಿದ್ದೇನು ?

ಬೆಂಗಳೂರು : ಗೋವಾ ಸಿಎಂ ಮನೋಹರ್‌ ಪರ್ರಿಕ್ಕರ್‌ ಹಾಗೂ ಬಿ.ಎಸ್‌ ಯಡಿಯೂರಪ್ಪ ಅವರನ್ನು ಕೂರಿಸಿಕೊಂಡು ಅಮಿತ್ ಶಾ ಮಹದಾಯಿ ವಿಚಾರವಾಗಿ ಸಂಧಾನ ಸಭೆ ನಡೆಸಿದ್ದು,  ಸಭೆ ಯಶಸ್ವಿಯಾಗಿದ್ದಾಗಿ ಹೇಳಲಾಗಿತ್ತು.

ಗೋವಾ ಸಿಎಂ ಮನೋಹರ್‌ ಪರ್ರಿಕ್ಕರ್‌ ಮರಾಠಿ ತರುಣ್‌ ಭಾರತ್‌ ಪತ್ರಿಕೆಗೆ ನೀಡಿರುವ ಸಂದರ್ಶನದಲ್ಲಿ ನೀಡಿರುವ ಹೇಳಿಕೆ ಅನುಮಾನ ಹುಟ್ಟಿಸಿದೆ. ನಾನು ವಿವಾದದ ಬಗ್ಗೆ ಚರ್ಚಿಸಿದ್ದೇನಷ್ಟೇ, ಭರವಸೆ ನೀಡಿಲ್ಲ ಎಂದಿದ್ದು, ಮಹದಾಯಿ ಕುರಿತ ನಮ್ಮ ನಿಲುವಿಗೆ ಈಗಲೂ ಬದ್ದರಾಗಿದ್ದೇವೆ. ನ್ಯಾಯಾಧಿಕರಣದ ಮೂಲಕವೇ ವಿವಾದ ಇತ್ಯರ್ಥವಾಗಬೇಕು. ಈ ವಿಚಾರದಲ್ಲಿ ಗೋವಾ ಪ್ರಜೆಗಳಿಗೆ ಮೋಸ ಮಾಡುವುದಿಲ್ಲ. ಅವರೂ ಆತಂಕಗೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.

ಪರ್ರಿಕ್ಕರ್‌ ಹೇಳಿಕೆ ಬೆನ್ನಲ್ಲೇ ಗೋವಾ ಜಲಸಂಪನ್ಮೂಲ ಸಚಿವ ವಿನೋದ್‌ ಪಾಳೇಕರ್‌ ಟ್ವೀಟ್‌ ಮಾಡಿದ್ದು. ಮಹದಾಯಿ ನಮಗೆ ತಾಯಿಯಿದ್ದಂತೆ. ಆಕೆಯ ರಕ್ಷಣೆ ನಮ್ಮ ಹೊಣೆ. ಒಂದೊಂದು ಹನಿ ನೀರನ್ನೂ ನಾವು ರಕ್ಷಣೆ ಮಾಡುತ್ತೇವೆ ಎಂದಿದ್ದಾರೆ. ಜೊತೆಗೆ ಗೋವಾ ಅಭಿವೃದ್ಧಿ ನಮ್ಮ ಗುರಿ. ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂದಿದ್ದಾರೆ.

ಬುಧವಾರ ಅಮಿತ್ ಶಾ ನೇತೃತ್ವದಲ್ಲಿ ಮಾಜಿ ಸಿಎಂ ಬಿಎಸ್‌ವೈ ಹಾಗೂ ಪರ್ರಿಕ್ಕರ್‌ ಮಧ್ಯೆ ಸಂಧಾನ ಸಭೆ ನಡೆಸಲಾಗಿತ್ತು. ವಿವಾದ ಕುರಿತಂತೆ ಮನವರಿಕೆ ಮಾಡಿಕೊಟ್ಟಿದ್ದರು. ಆದರೆ ಮದ್ಯಾಹ್ನ ಹುಬ್ಬಳ್ಳಿಯಲ್ಲಿ ನಡೆಯುವ ಸಮಾವೇಶದಲ್ಲಿ ಯಡಿಯೂರಪ್ಪ ಜನತೆಯ ಮುಂದೆ ಯಾವ ಉತ್ತರ ನೀಡುತ್ತಾರೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Leave a Reply

Your email address will not be published.