ಕಥನ ಭಾರತಿ ಸೇರಿದಂತೆ ಕನ್ನಡಕ್ಕೆ ಎರಡು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗರಿ

ಬೆಂಗಳೂರು : 2017ರ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದ್ದು. ಕನ್ನಡದ ಟಿ.ಪಿ ಅಶೋಕ್‌ ಅವರ ಕಥನ ಭಾರತಿ ಕೃತಿ ಆಯ್ಕೆಯಾಗಿದ್ದು 1 ಲಕ್ಷ ರೂ ನಗದನ್ನು ಪ್ರಶಸ್ತಿ ಒಳಗೊಂಡಿದೆ. 2017ರ ಕೇಂದ್ರ ಸಾಹಿತ್ಯ ಅಕಾಡೆಮಿ ಅನುವಾದ ಪ್ರಶಸ್ತಿಯನ್ನೂ ಪ್ರಕಟಿಸಲಾಗಿದ್ದು,  ಕನ್ನಡದ ಎಚ್‌.ಎಸ್‌ ಶ್ರೀಮತಿ ಅವರು ಅನುವಾದಿಸಿದ ಮಹಾಶ್ವೇತಾದೇವಿ ಅವರ ಕಥಾ ಸಾಹಿತ್ಯ -1 ಮತ್ತು 2 ಕೃತಿ ಆಯ್ಕೆಯಾಗಿದೆ. ಪ್ರಶಸ್ತಿ ಜೊತೆಗೆ 50 ಸಾವಿರ ರೂ ನಗದನ್ನು ಒಳಗೊಂಡಿರುವುದಾಗಿ ಅಕಾಡೆಮಿ ತಿಳಿಸಿದೆ.
ಕಥನ ಭಾರತಿಯ ಕರ್ತೃ ಟಿ.ಪಿ ಅಶೋಕ್‌ ಎರಡು ವರ್ಷಗಳ ಕಾಲ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಸದ್ಯ ಅವರು ಸಾಗರದ ಲಾಲ್‌ ಬಹದ್ದೂರ್‌ ಕಾಲೇಜಿನಲ್ಲಿ ಪ್ರಾದ್ಯಾಪಕ ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com