ಪ್ರೇಯಸಿಯ ಮೋಹಕ್ಕೆ ಬಿದ್ದು ಬ್ಯಾಂಕ್ ಮ್ಯಾನೇಜರ್‌ಗೆ ಕರೆಂಟ್ ಶಾಕ್‌ ಕೊಟ್ಟ ಪಾಗಲ್‌ ಪ್ರೇಮಿ !

ರಾಮನಗರ : ಬ್ಯಾಂಕ್ ಮ್ಯಾನೇಜರ್‌ ಅನಿಲ್‌ ಕೊಲೆ ಪ್ರಕರಣ ಬೇಧಿಸುವಲ್ಲಿ ಕಗ್ಗಲೀಪುರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಇದೇ ಡಿಸೆಂಬರ್‌ 3ರಂದು ಕೋಟಕ್‌ ಮಹೀಂದ್ರಾ ಬ್ಯಾಂಕ್‌ನ ಡೆಪ್ಯುಟಿ ಮ್ಯಾನೇಜರ್ ಅನಿಲ್ ನಾಪತ್ತೆಯಾಗಿದ್ದು ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಅದೇ ದಿನ ಕಗ್ಗಲೀಪುರ ಠಾಣಾ ವ್ಯಾಪ್ತಿಯಲ್ಲಿ ಅನಿಲ್‌ ಅವರ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇಂದು ಕೊಲೆಗಾರನನ್ನು ಬಂಧಿಸಿದ್ದು, ಆತನನ್ನು ಮಾರ್ಕೆಟಿಂಗ್ ಮ್ಯಾನೇಜರ್‌ ಶಿವಬಸವೇಗೌಡ ಎಂದು ಗುರುತಿಸಲಾಗಿದೆ.

ಅನಿಲ್ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿದ್ದು, ಮೊಬೈಲ್‌ ಕರೆ, ಮೆಸೇಜ್‌ಗಳ ಜಾಡು ಹಿಡಿದಿದ್ದರು. ಈ ವೇಳೆ ಶಿವಬಸವೇಗೌಡನ ಮೇಲೆ ಪೊಲೀಸರಿಗೆ ಅನುಮಾನ ಬಂದು ವಿಚಾರಿಸಿದಾಗ, ಆತ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಗೆ ಕಾರಣವೇನು ?

ಶಿವಬಸವೇಗೌಡ, ಅನಿಲ್‌ ಪತ್ನಿಯನ್ನು ಪ್ರೀತಿಸುತ್ತಿದ್ದ. ಆಕೆಯ ಮೋಹಕ್ಕೆ ಬಿದ್ದು ಅನಿಲ್‌ನನ್ನು ಕೊಂದಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಅನಿಲ್‌ಗೆ ಶ್ವೇತಾ ಎಂಬಾಕೆಯ ಜೊತೆ ಮದುವೆ ನಿಶ್ಚಯವಾಗಿತ್ತು. ಶಿವಬಸವೇಗೌಡ ಸಹ ಶ್ವೇತಾಳನ್ನು ಪ್ರೀತಿಸುತ್ತಿದ್ದ. ತಾನು ಪ್ರೀತಿಸಿದ ಹುಡುಗಿಯನ್ನು ಇನ್ನೊಬ್ಬ ಮದುವೆಯಾಗುತ್ತಾನೆ ಎಂಬ ಸಿಟ್ಟಿನಿಂದ ಅನಿಲ್‌ ಜೊತೆ ಸ್ನೇಹ ಸಂಪಾದಿಸಿ ಬಳಿಕ ಆತನನ್ನು ಫೋನ್‌ ಮಾಡಿ ಉತ್ತರಿ ಗ್ರಾಮದ ಬಳಿ ಕರೆಸಿಕೊಂಡಿದ್ದ. ಬಳಿಕ 440 ಕೆ.ವಿ ಸಾಮರ್ಥ್ಯದ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಬಳಿ ಕರೆದೊಯ್ದು ವಿದ್ಯುತ್‌ ತಂತಿಯನ್ನು ಅನಿಲ್ ದೇಹಕ್ಕೆ ಹಿಡಿದು ಕೊಲೆ ಮಾಡಿ ಎಸ್ಕೇಪ್ ಆಗಿದ್ದ . ಅಲ್ಲದೆ ಆ ರೀತಿ ಕೊಲ್ಲಲು ಅನೇಕ ಬಾರಿ ಅಭ್ಯಾಸ ಮಾಡಿದ್ದ ಎಂದು ತಿಳಿದುಬಂದಿದೆ.

 

Leave a Reply

Your email address will not be published.