ನಾವು ಯಾರನ್ನೂ ಕಿಂಗ್ ಮಾಡೋಕೆ ಬಂದಿಲ್ಲ, ಇಲ್ಲಿ ನಾವೇ ಕಿಂಗ್‌ : ಮಧು ಬಂಗಾರಪ್ಪ

ಬಾಗಲಕೋಟೆ : ಒಬ್ಬರು ಜಾತಿ ಒಡೆಯುತ್ತಿದ್ದಾರೆ ಇನ್ನೊಬ್ಬರು ಧರ್ಮ ಒಡೆಯುತ್ತಿದ್ದಾರೆ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಬಗ್ಗೆ ಜೆಡಿಎಸ್ ಯುವಘಟಕ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಕಿಡಿ ಕಾರಿದ್ದಾರೆ.

ಬಾಗಲಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪರಿವರ್ತನಾ ರ್ಯಾಲಿಗೆ ನಿರ್ಧಿಷ್ಟ ಅಜೆಂಡಾನೆ ಇಲ್ಲ ಬರಿ ಕಾಂಗ್ರೆಸ್ ಗೆ ಬಯ್ಯೋದೆ ಆಗಿದೆ. ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಕಿಂಗ್ ಮೇಕರ್? ಎಂಬ ಪ್ರಶ್ನೆಗೆ ಉತ್ತರಿಸಿದ ಮಧು ಬಂಗಾರಪ್ಪ ನಾವು ಯಾರನ್ನು ಕಿಂಗ್ ಮಾಡೋಕೆ ಬಂದಿಲ್ಲ. ಇಲ್ಲಿ ನಾವೆ ಕಿಂಗ್ ಕುಮಾರಸ್ವಾಮಿಯವರೆ ಕಿಂಗ್ , ನಾವೇ ಮುಂಬರುವ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದಿದ್ದಾರೆ.

ಬಿಎಸ್ ವೈ ಗೆ ನಾನು ಕಚಡಾ ಮುಖ್ಯಮಂತ್ರಿ ಅಂದಿದ್ದು ನಿಜ ಆ ಮಾತಿಗೆ ಈಗಲೂ ಬದ್ದ ಎಂದಿದ್ದಲ್ಲದೆ, ಎರಡು ಪಕ್ಷದವರು ರಾಜ್ಯಕ್ಕೆ ಬೆಂಕಿ ಹಚ್ಚುವ ಪದ ಬಳಕೆ ಮಾಡುತ್ತಿದ್ದಾರೆ.  ಇವರನ್ನು ದೇಶದ್ರೋಹಿಗಳು ಎಂದರೆ ತಪ್ಪಿಲ್ಲ. ಇನ್ನು ಜೆಡಿಎಸ್ ಪಕ್ಷ ತೊರೆದವರ ಬಗ್ಗೆ ಮಾತನಾಡಿ ಅವರು ಪಕ್ಷ ಬಿಟ್ಟು ಹೋಗಿದ್ದು ಯಾವುದೇ ಪರಿಣಾಮ ಬೀರೋದಿಲ್ಲ.ಅವರು ಬಿಟ್ಟು ಹೋದ ಮೇಲೆ ಪಕ್ಷ ಮತ್ತಷ್ಟು ಬೆಳೆದಿದೆ ಎಂದು ಜಮೀರ್ ಅಹ್ಮದ್ ‌ಮತ್ತು ಇತರರಿಗೆ ಟಾಂಗ್ ನೀಡಿದರು.

ಪ್ರಜ್ವಲ್ ರೇವಣ್ಣ ಚುನಾವಣೆ ಸ್ಪರ್ಧೆ ಬಗ್ಗೆ ಅಪೇಕ್ಷೆ ಪಡೋದು ತಪ್ಪಲ್ಲ. ಅವರು ಗೌಡರ ಮಡಿಲಲ್ಲಿ ಬೆಳೆದವರು.  ಆ ಬಗ್ಗೆ ಮುಖಂಡರು ನಿರ್ಧಾರ ಕೈಗೊಳ್ಳುತ್ತಾರೆ ಎಂದರು. ಜೆಡಿಎಸ್ ಶಾಸಕ ಜಿಟಿ ದೇವೆಗೌಡ ಮೇಲೆ ಎಸಿಬಿ ಕೇಸ್ ಬಗ್ಗೆ ಮಾತನಾಡಿ, ಎಸಿಬಿ ಕೇಸ್ ಎಷ್ಟೇ ಆದರೂ ಅವುಗಳನ್ನು ಕಸದ ಬುಟ್ಟಿಗೆ ಹಾಕುತ್ತೇವೆ. ಒಂದು ವೇಳೆ ಜೈಲಿಗೆ ಕಳಿಸಿದರೂ ಜೈಲಿನಲ್ಲಿ ಇದ್ದುಕೊಂಡೆ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಕುಮಾರ ಬಂಗಾರಪ್ಪ ಬಗ್ಗೆ ಉತ್ತರಿಸಿ ನಾನು ದಿಕ್ಕು ತಪ್ಪುವ ಮಗನಲ್ಲ. ಕುಮಾರ ಬಂಗಾರಪ್ಪ ದಿಕ್ಕು ತಪ್ಪಿ ಬಿಜೆಪಿಗೆ ಹೋಗಿದ್ದಾರೆ ಎಂದು ಸಹೋದರನಿಗೆ ಟಾಂಗ್ ಕೊಟ್ಟಿದ್ದಾರೆ.

Leave a Reply

Your email address will not be published.