‘ ವಿರಾಟ್ ಕೊಹ್ಲಿ ದೇಶಭಕ್ತನಲ್ಲ..! ‘ : ಬಿಜೆಪಿ ಮುಖಂಡ ಹೀಗೆ ಹೇಳಿದ್ದೇಕೆ..?

‘ ವಿರಾಟ್ ಕೊಹ್ಲಿ ದೇಶಭಕ್ತನಲ್ಲ ‘ ಎಂದು ಮಧ್ಯಪ್ರದೇಶದ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ. ಸ್ಕಿಲ್ ಇಂಡಿಯಾ ಸೆಂಟರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ಪನ್ನಾಲಾಲ್ ಶಾಕ್ಯ ಈ ಹೇಳಿಕೆ ನೀಡಿದ್ದಾರೆ. ಭಾರತವನ್ನು ಕಡೆಗಣಿಸಿ ಇಟಲಿಯಲ್ಲಿ ವಿವಾಹವಾಗಿದ್ದಕ್ಕೆ ಕೊಹ್ಲಿ ದೇಶಭಕ್ತನಲ್ಲ ಎಂದು ಹೇಳಿದ್ದಾರೆ.

Image result for kohli marriage

‘ ರಾಮ, ಕೃಷ್ಣ, ವಿಕ್ರಮಾದಿತ್ಯ, ಯುಧಿಷ್ಠಿರ ಇವರೆಲ್ಲ ಭಾರತದ ನೆಲದಲ್ಲಿಯೇ ಮದುವೆಯಾಗಿದ್ದರು.  ಮದುವೆಯಾಗಲು ಇಡೀ ಭಾರತದಲ್ಲಿ ಯಾವುದೇ ಸರಿಯಾದ ಸ್ಥಳ ಸಿಗಲಿಲ್ಲವೇ..?

‘ ನಾವೆಲ್ಲರೂ ಇಲ್ಲಿಯೇ ಮದುವೆಯಾಗಿದ್ದೇವೆ. ವಿರಾಟ್ ಕೊಹ್ಲಿ ದುಡ್ಡು ಗಳಿಸಿದ್ದು ಇಲ್ಲಿ, ಆದರೆ ಇಟಲಿಯಲ್ಲಿ ಹೋಗಿ ಬಿಲಿಯನ್ ಗಟ್ಟಲೇ ಖರ್ಚು ಮಾಡಿದರು. ಕೊಹ್ಲಿಗೆ ದೇಶದ ಬಗ್ಗೆ ಯಾವುದೇ ಗೌರವವಿಲ್ಲ. ಇದು ಕೊಹ್ಲಿ ಒಬ್ಬ ದೇಶಭಕ್ತನಲ್ಲ ಎಂಬುದನ್ನು ತೋರಿಸುತ್ತದೆ ‘ ಎಂದಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಡಿಸೆಂಬರ್ 11 ರಂದು ಇಟಲಿಯ ಟಸ್ಕನಿಯಲ್ಲಿ ಮದುವೆಯಾಗಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com